ಬಂದಾರು : ಬಂದಾರು ಗ್ರಾಮ ಪಂಚಾಯತ್ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುದಾದದಲ್ಲಿ ಬಂದಾರು ಗ್ರಾಮದ ಮುರ್ತಾಜೆ ಎಂಬಲ್ಲಿನ ಕಾಂಕ್ರೀಟ್ ರಸ್ತೆ ಹಾಗೂ ಸೋಲಾರ್ ಲೈಟ್ ಉದ್ಘಾಟನೆ ಕಾರ್ಯಕ್ರಮ ಎ. 07 ರಂದು ನೆರವೇರಿತು.

ಹಿರಿಯರಾದ ರುಕ್ಮಯ ಪೂಜಾರಿ ಮತ್ತು ಸೂರಪ್ಪ ಪೂಜಾರಿ ಉದ್ಘಾಟನೆ ನೆರವೇರಿಸಿದರು. ಅನುದಾನ ಒದಗಿಸಿದ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಸದಸ್ಯರಾದ ಶ್ರೀಮತಿ ಸುಚಿತ್ರಾ ಮುರ್ತಾಜೆ, ಶ್ರೀಮತಿ ಪರಮೇಶ್ವರಿ ಪುಯಿಲ, ಹಾಗೂ ಸ್ಥಳೀಯರಾದ ಮೋಹಿನಿ ಮುರ್ತಾಜೆ, ಸೇಸಪ್ಪ ಪೂಜಾರಿ ಮುರ್ತಾಜೆ, ಶಾರದಾ ಪೂಜಾರಿ ಮುರ್ತಾಜೆ, ಪುಷ್ಪ ಸೂರಪ್ಪ ಪೂಜಾರಿ ಹಾಗೂ ಆ ಭಾಗದ ನಾಗರಿಕರು ಉಪಸ್ಥಿತರಿದ್ದರು.