
ಬೆಳ್ತಂಗಡಿ : ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿಯ ಹಣೆಗೆ ಪೊಲೀಸರೇ ಎದುರೇ ಯುವಕ ಮುತ್ತಿಟ್ಟ ಘಟನೆ ಬೆಳ್ತಂಗಡಿ ನ್ಯಾಯಾಲಯದ ಆವರಣದಲ್ಲಿ ಇಂದು ನಡೆದಿದೆ.
ನೆಟ್ಟಾರು ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಶಾಫಿ ಬೆಳ್ಳಾರೆಯನ್ನು 2017ರಲ್ಲಿ ಆರ್.ಎಸ್.ಎಸ್ ಹಾಗೂ ಕಲ್ಲಡ್ಕ ಭಟ್ ವಿರುದ್ಧ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳ್ತಂಗಡಿ ಕೋರ್ಟ್ ಗೆ ಬಾಡಿ ವಾರೆಂಟ್ ಮೂಲಕ ಹಾಜರುಪಡಿಸಲು ಪರಪ್ಪನ ಅಗ್ರಹಾರ ಜೈಲಿನಿಂದ ಕರೆ ತರಲಾಗಿತ್ತು. ಈ ವೇಳೆ ಯುವಕನೊಬ್ಬ ಪೊಲೀಸರ ಎದುರೇ ಶಾಫಿ ಹಣೆಗೆ ಮುತ್ತಿಕ್ಕಿದ್ದಾನೆ.
ಇಂದು ಶಾಫಿ ಬೆಳ್ಳಾರೆಯನ್ನು ಪೊಲೀಸರು ಕರೆ ತರುವ ಬಗ್ಗೆ ಗೊತ್ತಿದ್ದ ಕಾರಣ ಶಾಫಿ ಬೆಳ್ಳಾರೆ ನೋಡಲು ಆತನ ಸ್ನೇಹಿತರು ಬಂದಿದ್ದರು.ಅದರಲ್ಲಿ ಒಬ್ಬ ಆತನ ಹಣೆಗೆ ಮುತ್ತಿಕ್ಕಿದ್ದಾನೆ ಎಂದು ವರದಿಯಾಗಿದೆ.