ಉರುವಾಲು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಉರುವಾಲು ವಿಭಾಗ ಇದರ ಸಹಕಾರದೊಂದಿಗೆ
ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಉರುವಾಲು, ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ಕೊರಿಂಜ ,ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜ, ಜನಜಾಗೃತಿ ಗ್ರಾಮ ಸಮಿತಿ ಉರುವಾಲು, ಶ್ರೀ ಪಂಚಲಿಂಗೇಶ್ವರ ನವಜೀವನ ಸಮಿತಿ ಕೊರಿಂಜ, ಇವುಗಳ ಸಂಯುಕ್ತ ಆಶ್ರಯದಲ್ಲಿ 44ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ 5 ನೇ ವರ್ಷದ ಏಕಾಹ ಭಜನಾ ಮಹೋತ್ಸವ ಕಾರ್ಯಕ್ರಮವು ಕೊರಿಂಜ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಯೋಗೀಶ್ ಪೂಜಾರಿ ಕಡ್ತಿಲ ಇವರ ಅಧ್ಯಕ್ಷತೆಯಲ್ಲಿ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.

ಜ್ಞಾನೇಶ್ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಭಜನಾ ಮಂಡಳಿಯ ಕೋಶಾಧಿಕಾರಿ ಸೀತಾರಾಮ ಆಳ್ವ ಕೊರಿಂಜ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವೇದಿಕೆಯಲ್ಲಿ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಜಯ ವಿಕ್ರಮ್ ಕಲ್ಲಾಪು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪದ್ಮುಂಜ ಸಿ.ಎ ಬ್ಯಾಂಕ್ ನ ನಿರ್ದೇಶಕರಾದ ಶ್ರೀಮತಿ ಶಾರದ ಆರ್ ರೈ, ಕಣಿಯೂರು ವಲಯದ ಜನಜಾಗೃತಿ ವಲಯ ಅಧ್ಯಕ್ಷ ಪ್ರಪುಲ್ಲ ಚಂದ್ರ ಅಡ್ಯಂತಾಯ, ಕಣಿಯೂರು ವಲಯದ ಮೇಲ್ವಿಚಾರಕಿ ಕು| ಶಿಲ್ಪ, ಭಜನಾ ಮಂಡಳಿ ಗೌರವಾಧ್ಯಕ್ಷ ಸೇಸಪ್ಪ ರೈ ಕೊರಿಂಜ ಉಪಸ್ಥಿತರಿದ್ದರು.
ಮೈರೋಳ್ತಡ್ಕ ಶಾಲೆಯ ಸಹಶಿಕ್ಷಕರಾದ ಮಾಧವ ಗೌಡ ಕಾರ್ಯಕ್ರಮದ ನಿರೂಪಿಸಿ, ಕೃಷ್ಣಪ್ಪ ನಾಯ್ಕ ಕಲ್ಲಂಡ ಧನ್ಯವಾದವಿತ್ತರು.