ಇಂದಬೆಟ್ಟು: ಎ.8ರಂದು ಸಂಜೆ ಸುರಿದ ಬಾರಿ ಗಾಳಿ ಮಳೆಗೆ ಬೈರೊಟ್ಟು ಎಂಬಲ್ಲಿ ಅಕ್ಕು ಎಂಬವರ ಮನೆಯ ಸೀಟುಗಳು ಗಾಳಿಗೆ ಹಾರಿ ಹೋಗಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಅಪಾಯ ನಡೆದ ಸಂದರ್ಭದಲ್ಲಿ ಮನೆಯವರು ಮನೆಯೊಳಗಿದ್ದು ಅಕ್ಕುರವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಮನೆಯ ಇತರ ಸದಸ್ಯರು ಅಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಗ್ರಾಮದ ಕಂದಾಯ ಇಲಾಖೆಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು.