37.2 C
ಪುತ್ತೂರು, ಬೆಳ್ತಂಗಡಿ
April 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ವಿಧ್ಯಾರ್ಥಿಗಳಿಂದ ಅದ್ವಿತೀಯ ಸಾಧನೆ: 593 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣ, ವಿವಿಧ ವಿಷಯಗಳಲ್ಲಿ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದುಕೊಂಡು ಸಾಧನೆ: ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಕಾಲೇಜಿನ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್

ಗುರುವಾಯನಕೆರೆ: ದ್ವಿತೀಯ ಪಿಯುಸಿ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ಪ್ರತಿಷ್ಠಿತ ಕಾಲೇಜಾಗಿರುವ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮಾಡಿದ್ದಾರೆ.

593 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡು, ವಿವಿಧ ವಿಷಯಗಳಲ್ಲಿ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದುಕೊಂಡು ಸಾಧನೆ ಮಾಡಿದವರು ಹಲವರು. 594 ಅಂಕಗಳನ್ನು ಪಡೆದುಕೊಂಡ ಪ್ರತೀಕ್ಷಾ ಎಸ್ ರಾಜ್ಯಕ್ಕೆ ಆರನೆಯ ಸ್ಥಾನ, 592 ಅಂಕಗಳನ್ನು ಪಡೆದುಕೊಂಡ ಕೃಪಾ ಸಾಂಚಿ ಮೌರ್ಯ ರಾಜ್ಯಕ್ಕೆ ಎಂಟನೆಯ ಸ್ಥಾನ, 591 ಅಂಕಗಳನ್ನು ಪಡೆದು ಕೊಂಡ ಹೇಮಂತ್ ಎಸ್ ಜೆ ರಾಜ್ಯಕ್ಕೆ ಒಂಬತ್ತನೆಯ ಸ್ಥಾನ ಪಡೆದು ಕೊಂಡಿದ್ದಾರೆ.

ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವುದು ಉಲ್ಲೇಖನೀಯ. ಕಳೆದ ಬಾರಿ 597 ಅಂಕಗಳ ಜೊತೆಗೆ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ದ್ವಿತೀಯ ಸ್ಥಾನಿಗಳಾಗಿದ್ದರು. ರಾಜ್ಯದ ಟಾಪ್ ಟೆನ್ ನಲ್ಲಿ ಎಕ್ಸೆಲ್ ನ 9 ವಿದ್ಯಾರ್ಥಿಗಳಿದ್ದರು. ಕಳೆದ ಜನವರಿ ತಿಂಗಳಲ್ಲಿ ನಡೆದ ಜೆ ಇ ಇ ಪರೀಕ್ಷೆಯಲ್ಲಿ ಪ್ರಣವ್ ಪೊನ್ನಣ್ಣ 99.58, ಮೊಹಮ್ಮದ್ ಆಯ್ಮಾನ್ 99.23, ನಿಶಾಂತ್ ಜೈನ್ 99.21, ನಾಗಣ್ಣ ಗೌಡ 99.15 ಪರ್ಸಂಟೇಲ್ ನೊಂದಿಗೆ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ ಸಿ ಇ ಟಿ ಯಲ್ಲಿ 17 ವಿದ್ಯಾರ್ಥಿಗಳು 1000 ದ ಒಳಗೆ ರಾಂಕ್, 48 ವಿದ್ಯಾರ್ಥಿಗಳು 2000ದ ಒಳಗೆ ರಾಂಕ್ ಪಡೆದುಕೊಂಡಿದ್ದರು. ಕಳೆದ ಬಾರಿಯ ನೀಟ್ ಪರೀಕ್ಷೆಯಲ್ಲಿ 720 ರಲ್ಲಿ 710 ಅಂಕಗಳನ್ನು ಪಡೆದುಕೊಂಡು ಪ್ರಜ್ವಲ್ ಎಚ್ ಎಂ ರಾಜ್ಯಕ್ಕೆ ಗೌರವವನ್ನು ತಂದಿದ್ದರು. ಒಟ್ಟು ನಾಲ್ಕು ವಿದ್ಯಾರ್ಥಿಗಳು ಏಮ್ಸ್ ಗೆ ಆಯ್ಕೆಯಾಗಿದ್ದರು. ಹಲವು ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳಲ್ಲಿ ಸ್ಥಾನ ಪಡೆಯುವುದರೊಂದಿಗೆ, ರಾಜ್ಯದ ಶೈಕ್ಷಣಿಕ ಭೂಪಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದರು. ಪ್ರತಿ ವರ್ಷ ಎಕ್ಸೆಲ್ ಕಾಲೇಜಿನಿಂದ ನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಎಂ.ಬಿ. ಬಿ.ಎಸ್ ಗೆ ಆಯ್ಕೆಯಾಗುತ್ತಾ ಬಂದಿರುವುದು ವಿಶೇಷ.

ರಾಜ್ಯದಲ್ಲಿ ಪ್ರತಿ ವರ್ಷ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ವೈದ್ಯಕೀಯ ಶಿಕ್ಷಣಕ್ಕೆ ಕಳುಹಿಸುತ್ತಿರುವ ಕೀರ್ತಿ ಎಕ್ಸೆಲ್ ಕಾಲೇಜಿನದ್ದಾಗಿದೆ. ಎನ್ ಡಿ ಎ ಸಹಿತ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಎಕ್ಸೆಲ್ ನ ವಿದ್ಯಾರ್ಥಿಗಳು ಅಪೂರ್ವ ಸಾಧನೆ ಮಾಡಿದ್ದಾರೆ. ಪ್ರತಿ ಬಾರಿಯಂತೆ , ಎಕ್ಸೆಲ್ ನ ವಿಜಯದ ಓಟ ಮುಂದುವರೆದಿದ್ದು, ಈ ಬಾರಿಯ ಅಪೂರ್ವ ಸಾಧನೆಗೆ ಪಾಲಕರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಪ್ರಾಧ್ಯಾಪಕರು ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗ ಹಾಗೂ ಹೆತ್ತವರು ಶೈಕ್ಷಣಿಕ ಸಾಧಕರನ್ನು ಅಭಿನಂದಿಸಿದ್ದಾರೆ.

Related posts

ಉಜಿರೆ : ಎಸ್.ಡಿ.ಎಂ. ಮಹಿಳಾ ಐಟಿಐಯಲ್ಲಿ ‘ಕೌಶಲ್ಯಾಭಿವೃದ್ಧಿ ಕಾರ್ಯಾಗಾರ’

Suddi Udaya

ಆ.21-22: ರೈತರಿಗೆ ಜೇನು ಕೃಷಿ ಹಾಗೂ ಜೇನಿನ ಮೌಲ್ಯವರ್ಧನೆ ಕುರಿತು ಸಾಂಸ್ಥಿಕ ತರಬೇತಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಗುರುವಾಯನಕೆರೆ – ‘ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ-

Suddi Udaya

ಕಳೆಂಜ: ರಾಮಣ್ಣ ಗೌಡ ಬರೆಂಗಾಯ ನಿಧನ

Suddi Udaya

ಸುಣ್ಣದಕೆರೆ ಅಂಗನವಾಡಿ ಕೇಂದ್ರದ ನಿವೃತ್ತ ಕಾರ್ಯಕರ್ತೆ ವಸಂತಿರವರಿಗೆ ಸನ್ಮಾನ

Suddi Udaya

ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ವತಿಯಿಂದ ಅಶಕ್ತರ ಮನೆ ಬಾಗಿಲಿಗೆ ಆಧಾರ್ ಸೇವೆ

Suddi Udaya
error: Content is protected !!