ಬೆಳ್ತಂಗಡಿ: ಮಾರ್ಚ್ 2025 ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಇಲ್ಲಿಂದ 311 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 292 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
ಕಲಾವಿಭಾಗದಲ್ಲಿ 89% ವಾಣಿಜ್ಯ ವಿಭಾಗದಲ್ಲಿ 99% ವಿಜ್ಞಾನ ವಿಭಾಗದಲ್ಲಿ 98% ಫಲಿತಾಂಶ ದಾಖಲಾಗಿದ್ದು ಒಟ್ಟಾರೆ ಕಾಲೇಜಿನ ಫಲಿತಾಂಶ 94% ಆಗಿರುತ್ತದೆ.
ವಾಣಿಜ್ಯ ವಿಭಾಗದ ಸಾನ್ವಿತ್ ಕೆ 579 ಅಂಕಗಳೊಂದಿಗೆ ಕಾಲೇಜಿನ ಟಾಪರ್ ಆಗಿದ್ದು ಸುರಕ್ಷಾ 578 ಅಂಕಗಳೊಂದಿಗೆ ಕಾಲೇಜಿಗೆ ದ್ವಿತೀಯ ಸ್ಥಾನ ಆಗಿದ್ದು ಶ್ರೀವತ್ಸ. ವಿಜ್ಞಾನ ವಿಭಾಗ 570 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ 27, ವಿಜ್ಞಾನ ವಿಭಾಗದಲ್ಲಿ 18, ಕಲಾ ವಿಭಾಗದಲ್ಲಿ 9 ಹೀಗೆ ಒಟ್ಟು 54 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. 196 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರೆ 44 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯನ್ನು ಪಡೆದು 16 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ ಪ್ರಾಂಶುಪಾಲರು ಉತ್ತಮ ಫಲಿತಾಂಶಕ್ಕೆ ಪ್ರಯತ್ನಿಸಿದ ಎಲ್ಲ ಉಪನ್ಯಾಸಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.