April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರ

ಅರಸಿನಮಕ್ಕಿ : ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಎ. 07 ರಂದು ಶಿಶಿಲ ಅರಸಿನಮಕ್ಕಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ‌ಹಾಗೂ ಅರಣ್ಯ ಇಲಾಖೆ ಉಪ್ಪಿನಂಗಡಿ ವಲಯ ಇವೆರಡರ ಸಹಭಾಗಿತ್ವದಲ್ಲಿ ಒಂದು ದಿನದ ಬೇಸಿಗೆ ಶಿಬಿರವನ್ನು ಸಹ್ಯಾದ್ರಿ ಸಂಚಯದ ಕಾರ್ಯದರ್ಶಿ  ಅಂತರ್ ರಾಷ್ಟ್ರೀಯ ಖ್ಯಾತಿಯ ಕಲಾವಿದ ಹಾಗೂ ಪರಿಸರ ಪ್ರೇಮಿ ದಿನೇಶ್ ಹೊಳ್ಳ ಮಂಗಳೂರು ನಡೆಸಿಕೊಟ್ಟರು.

ಶಿಬಿರದಲ್ಲಿ ಹತ್ತಿರದ ಹೊಸ್ತೋಟ ಶಾಲಾ ಮಕ್ಕಳು ಭಾಗವಹಿಸಿದ್ದರು. ಖ್ಯಾತ ಉರಗ ಸಂರಕ್ಷಕ ಸುರೇಶ್ ರಮೇಶ್ ಶಿಶಿಲ ಹಾಗೂ  ಅರಣ್ಯಾಧಿಕಾರಿ ಸಚಿನ್ ಉರಗಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ದಿನೇಶ್ ಹೊಳ್ಳ ಮಕ್ಕಳಿಗೆ ಪೇಪರ್ ಕ್ರಾಫ್ಟ್ ಅಕ್ಷರ ವಿನ್ಯಾಸದ ಬಗ್ಗೆ ಮಾಹಿತಿ ನೀಡಿ, ಮಿಮಿಕ್ರಿ, ವಿವಿಧ ಬಗೆಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ನೀಡಿ ಮಕ್ಕಳನ್ನು ರಂಜಿಸಿದರು. ವಿಶೇಷವಾಗಿ ಪಶ್ಚಿಮ ಘಟ್ಟಗಳ ಮತ್ತು ಅದರಲ್ಲಿರುವ ಜೀವವೈವಿಧ್ಯಗಳ ಸಂರಕ್ಷಣೆಯ ವಿಚಾರದಲ್ಲಿ ಮಕ್ಕಳು ಏನು ಪ್ರಯತ್ನ ಮಾಡಬಹುದೆಂದು ಮನಮುಟ್ಟುವಂತೆ ವಿವರಿಸಿದರು.

ಅರಸಿನಮಕ್ಕಿ ಶಿಶಿಲ ಶೌರ್ಯ ವಿಪತ್ತು ನಿರವಹಣಾ ಘಟಕದ ಸಂಯೋಜಕಿ ರಶ್ಮಿತಾ ಶಿಶಿಲ ಸ್ವಯಂಸೇವಕರಾದ ಅವಿನಾಶ್ ಬಿಢೆ ಅರಸಿನಮಕ್ಕಿ ‌ಹಾಗೂ ರಮೇಶ್.ಬಿ.ಶಿಶಿಲ ಸಹಕಾರ ನೀಡಿದರು.ಹೊಸ್ತೋಟ ಮತ್ತು ಅರಸಿನಮಕ್ಕಿ ಶಾಲಾ ಮುಖ್ಯ ಗುರುಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

Related posts

ಗೇರುಕಟ್ಟೆ :ಪರಪ್ಪು ಜಮಾಅತ್ ನಿಂದ ಅಭಿನಂದನಾ ಸಭೆ: ದರ್ಗಾ ಸುತ್ತಮುತ್ತ ಶಾಶ್ವತ ಕಾಮಗಾರಿ ನಡೆಸಿದ ಮುಸ್ಲಿಮ್ ಯೂತ್ ವಿಂಗ್ ಸಮಿತಿಗೆ ಗೌರವಾರ್ಪಣೆ

Suddi Udaya

ಕಲ್ಮಂಜ ಮಿಯಾ ನಿವಾಸಿ ಅಡಿಕೆ ವ್ಯಾಪಾರಿ ಅಚ್ಚುತ ಭಟ್ ಮನೆಯಿಂದ ದರೋಡೆ ಪ್ರಕರಣ : ಆರೋಪಿಗಳಿಗೆ ನ್ಯಾಯಾಂಗ ಬಂಧನ

Suddi Udaya

ಬಳಂಜ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಬ್ರಹ್ಮಶ್ರೀ ಮಂಡಳಿಯಿಂದ ಪೆನ್ನು ವಿತರಣೆ

Suddi Udaya

ಬೆಳ್ತಂಗಡಿ: ಸಂತ ತೆರೇಸಾ ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಹ್ಯಾಂಡ್‌ಬಾಲ್ ಪಂದ್ಯಾಟ

Suddi Udaya

ಲಾಯಿಲ: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಸಾವು

Suddi Udaya

ಮದ್ದಡ್ಕ ಪೇಟೆಯಲ್ಲಿ 2 ತಿಂಗಳಿಂದ ಉರಿಯುತ್ತಿಲ್ಲ ದಾರಿ ದೀಪ: ದುರಸ್ತಿಗೊಳಿಸುವಂತೆ ಸ್ಥಳೀಯರ ಒತ್ತಾಯ

Suddi Udaya
error: Content is protected !!