ಉಜಿರೆ: ಅಭ್ಯಾಸ್ ಪದವಿ ಪೂರ್ವ ಕಾಲೇಜು ಉಜಿರೆ ಕಾಶಿಬೆಟ್ಟು ಪ್ರಗತಿನಗರ ಇದರ ವತಿಯಿಂದ ಅಭ್ಯಾಸ್ ಸ್ಪಾರ್ಕ್ ಶೀರ್ಷಿಕೆಯಡಿಯಲ್ಲಿ ಸೇತುಬಂಧ ಕಾರ್ಯಕ್ರಮ ಏ.6 ರಂದು ನಡೆಯಿತು.
ಸಂಸ್ಥೆಯ ಅಧ್ಯಕ್ಷ ಕಾರ್ತಿಕೇಯ ಉದ್ಘಾಟಿಸಿ ಕಾರ್ಯಕ್ರಮದ ಔಚಿತ್ಯವನ್ನು ವಿವರಿಸಿದರು. ಸಂಸ್ಥೆಯ ಆಡಳಿತ ಅಧಿಕಾರಿ ಪ್ರಮೋದ್ ಗೌಡ ಹಾಗೂ ಪಿ.ಆರ್.ಓ ಧನಂಜಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಷಯವಾರು ಪರಿಣಿತ ಉಪನ್ಯಾಸಕರುಗಳು ವೇದಿಕೆಯಲ್ಲಿ ಆಸೀನರಾಗಿದ್ದರು. ಕಾಲೇಜಿನ ಉಪಪ್ರಾಂಶುಪಾಲರು ಪ್ರೊ. ಚಂದ್ರಶೇಖರ್ ಗೌಡ ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ತಾವು ಆಯ್ಕೆ ಮಾಡುವ ವಿಷಯ ಹಾಗೂ ಮುಂದಿನ ಉದ್ಯೋಗ ಅವಕಾಶಗಳ ಕುರಿತು ಮಾತನಾಡಿದರು. 80ಕ್ಕಿಂತ ಹೆಚ್ಚು ವಿದ್ಯಾರ್ಥಿ ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಗುರುಪ್ರಸಾದ್ ಭಟ್ ಧನ್ಯವಾದ ನೀಡಿದರು.