23.3 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ: ಶ್ರೀ ದುರ್ಗಾ ಬ್ಯಾಟರಿ ಸೋಲಾರ್, ಆಟೋ ಎಲೆಕ್ಟ್ರಿಕಲ್ ವರ್ಕ್ಸ್ ಶುಭಾರಂಭ

ಬೆಳ್ತಂಗಡಿ: ಶ್ರೀ ದುರ್ಗಾ ಬ್ಯಾಟರಿ ಸೋಲಾರ್ ಮತ್ತು ಆಟೋ ಎಲೆಕ್ಟ್ರಿಕಲ್ ವರ್ಕ್ಸ್ ಏ. 7 ರಂದು ಗುರುವಾಯನಕೆರೆ ಶಕ್ತಿನಗರ ಅರಮಲೆ ಬೆಟ್ಟದ ಸಮೀಪದ ದಿವ್ಯಶ್ರೀ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಂಡಿತು. ಶ್ರೀನಿವಾಸ್ ಭಟ್ ಗೇರುಕಟ್ಟೆ ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ಮಳಿಗೆಯಲ್ಲಿ ಎಲ್ಲಾ ತರಹದ ವಾಹನಗಳ ಆಟೋ ವರ್ಕ್ಸ್ ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುತ್ತದೆ. ಆಟೋ ಎಲೆಕ್ಟ್ರಿಕಲ್ ವರ್ಕ್ಸ್ ಜೊತೆಗೆ ಸೋಲಾರ್ ಅಳವಡಿಸಿಕೊಡಲಾಗುವುದು. ಗ್ರಾಹಕರಿಗೆ ಕ್ಲಪ್ತ ಸಮಯಕ್ಕೆ ಉತ್ತಮ ಸೇವೆ ನೀಡುವ ಉದ್ದೇಶ ನಮ್ಮ ಮಳಿಗೆಯದು. ಮುಂಬರುವ ದಿನಗಳಲ್ಲಿ ವಿನೂತನ ಯೋಜನೆಗಳ ಮೂಲಕ ಬ್ಯಾಟರಿ ಸೋಲಾರ್ ಖರೀದಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಮಾಲಕ ಲೋಕೇಶ್ ಪೂಜಾರಿ ಪಡಂಗಡಿ ತಿಳಿಸಿದರು.

ವೇಣೂರು ಎಸ್‌ಡಿಎಂ ಐಟಿ ಉಪನ್ಯಾಸಕ ಸತೀಶ್, ಮಾಲಕಿ ನಮಿತಾ ಲೋಕೇಶ್, ಉಜಿರೆ ಶ್ರೀ ಗುರು ರೇಡಿಮೆಡ್ ಮಾಲಕ ಯೋಗೀಶ್, ಯೋಧರ, ನವೀನ್, ಅಖಿಲ್ ಪ್ರವೀಣ್, ಸಂತೋಷ್ ಮೊದಲಾದವರು ಉಪಸ್ಥಿತರಿದ್ದರು.

Related posts

ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಾಲೋಚನಾ ಸಭೆ

Suddi Udaya

ಲಾಯಿಲ: ಪಡ್ಲಾಡಿ ನಿವಾಸಿ ರೋಹಿತ್ ರಾಯನ್ ಡಿಸೋಜ ನಿಧನ

Suddi Udaya

ಹೊಂಬೆಳಕು ಕಾರ್ಯಕ್ರಮದಲ್ಲಿ ಉಜಿರೆ ಪಂ.ಅ.ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ರವರಿಗೆ ಸನ್ಮಾನ

Suddi Udaya

ಮಹಾಕುಂಭಮೇಳದಲ್ಲಿ ಪವಿತ್ರ ಸ್ನಾನಗೈದ ಉದ್ಯಮಿ ಅಭಿನಂದನ್ ಹರೀಶ್ ಕುಮಾರ್

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವ: ಎಸ್ ಎಸ್ ಎಲ್ ಸಿ ಸಾಧಕ ಚಿನ್ಮಯಿ ಜಿ.ಕೆ ರವರಿಂದ ಶೈಕ್ಷಣಿಕ ವರ್ಷಕ್ಕೆ ಚಾಲನೆ

Suddi Udaya

ಬಳಂಜ: ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯಿಂದ ವೈದ್ಯಕೀಯ ನೆರವು

Suddi Udaya
error: Content is protected !!