ಕಳಿಯ ಗ್ರಾಮ ಪಂಚಾಯತ್ ನ ಕಳಿಯ ಮತ್ತು ನ್ಯಾಯತರ್ಪು ಗ್ರಾಮದ ಐದು ಬೂತನ್ನೊಳಗೊಂಡ ಪಂಚಾಯತ್ ಸಮಿತಿಯ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸಿಗ ಕಳಿಯ ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷರೂ,ಕಳಿಯ ಸಿ.ಎ.ಬ್ಯಾಂಕಿನ ಮಾಜಿ ಉಪಾಧ್ಯಕ್ಷರಾಗಿದ್ದ ಅಡೂರು ಸತೀಶ್ ನಾಯ್ಕ್ ನಾಳ ಆಯ್ಕೆ ಆಗಿದ್ದಾರೆ.
ವೀಕ್ಷಕರಾಗಿ ಪ್ರಮೋದ್ ಕುಮಾರ್ ಮಚ್ಚಿನ ಆಗಮಿಸಿದ್ದರು. ಹಾಗೂ ಉಪಾದ್ಯಕ್ಷರುಗಳಾಗಿ ಪ್ರದೀಪ್ ಕುಮಾರ್ ಪೇರಾಜೆ, ರಶೀದ್ ಪರಿಮ, ನೇವಿಲ್ ಮೊರಾಸ್, ಪ್ರಧಾನ ಕಾರ್ಯದರ್ಶಿಗಳಾಗಿ ಹರೀಶ್ ಗೌಡ ಕೆರೆಕೋಡಿ, ಶ್ರೀಮತಿ ಶ್ವೇತಾ, ನೌಷದ್ ಜಿ, ಕಾರ್ಯದರ್ಶಿಗಳಾಗಿ ಶ್ರೀಮತಿ ಪುಷ್ಪಾ ಎಸ್ ನಾಯ್ಕ, ಸುಮಲತಾ ಬಟ್ಟೆಮಾರು, ನಾಸಿರ್ ನಡತೊಟ್ಟು ಆಯ್ಕೆಯಾದರು.
ಬೂತ್ ಸಮಿತಿಯ ಅಧ್ಯಕ್ಷರುಗಳಾಗಿ ಕಳಿಯ ಒಂದನೇ ಬ್ಲಾಕ್ ಗೆ ರಹಿಮಾನ್ ಮಾಸ್ಟರ್, ಎರಡನೇ ಬ್ಲಾಕ್ ಗೆ ಸಿದ್ದೀಕ್ ಜಿ ಎಚ್, ಮೂರನೇ ಬ್ಲಾಕ್ ಗೆ ಸೋಮನಾಥ್ ಇಡ್ಯ ಹಾಗೂ ನ್ಯಾಯತರ್ಪು ಗ್ರಾಮದ ಒಂದನೇ ಬ್ಲಾಕ್ ಗೆ ಹರೀಶ್ ನಾಳ, ಎರಡನೇ ಬ್ಲಾಕ್ ಗೆ ಆಸಿಫ್ ಪಳ್ಳಾದೆ ಆಯ್ಕೆಯಾದರು. ಸಭೆಯು ಪರಪ್ಪು ನೇವಿಲ್ ಮೊರಾಸ್ ಮನೆಯಲ್ಲಿ ನಡೆಯಿತು.
ಸಭೆಯಲ್ಲಿ ಅಬ್ಬುಲ್ ಕರೀಮ್, ರಾಘವ ಎಚ್,ಸತೀಶ್ ನಾಯ್ಕ್ ,ಲತೀಫ್ ಪರಿಮ, ಇಸ್ಮಾಯಿಲ್ ಪಳ್ಳಾದೆ, ನೇವಿಲ್ ಮೊರಾಸ್, ಶ್ರೀಮತಿ ಮರೀಟಾ ಪಿಂಟೋ, ಶ್ರೀಮತಿ ಮೋಹಿನಿ, ಶ್ರೀಮತಿ ಪುಷ್ಪಾ,ಸೋಮನಾಥ ಇಡ್ಯ,ಉಮರಬ್ಬ ಜಾರಿಗೆಬೈಲು, ಬೊಮ್ಮಣ್ಣ ಗೌಡ, ಆಸಿಫ್ ಪಳ್ಳಾದೆ, ರಹಿಮಾನ್ ಮಾಸ್ಟರ್, ಹರೀಶ್ ನಾಳ ಹಾಜರಿದ್ದರು.