
ಬೆಳ್ತಂಗಡಿ: ನವೋದಯ ಸ್ವಸಹಾಯ ತಂಡದ ರಜತ ಮಹೋತ್ಸವದ ಅಂಗವಾಗಿ ನವೋದಯ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರು ತಂಡದ ಮಹಿಳಾ ಸದಸ್ಯರಿಗೆ ನೀಡಿದ ಸಮವಸ್ತ್ರ ವಿತರಣೆಯು ಬೆಳ್ತಂಗಡಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಎಸ್.ಸಿ.ಡಿ.ಸಿ.ಸಿ ಬೆಳ್ತಂಗಡಿ ಶಾಖಾ ವ್ಯವಸ್ಥಾಪಕ ಸುಧಿರ್ ಎಸ್.ಪಿ,ತಾಲೂಕು ಮೇಲ್ವಿಚಾರಕ ವಿನೋದ್, ವಲಯ ಪ್ರೇರಕಿ ಜಯಂತಿ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು