ಉಜಿರೆ: ಶ್ರೀ ಆದಿ ನಾಗಬ್ರಹ್ಮ ಮೊಗರ್ಕಳ ದೈವಸ್ಥಾನ, ಸ್ವಾಮಿ ಕೊರಗಜ್ಜ ಸನ್ನಿಧಿ ಶ್ರೀ ಕ್ಷೇತ್ರ ಎರ್ನೋಡಿ ಇಲ್ಲಿ 21ನೇ ವರ್ಷದ ಎರ್ನೋಡಿ ಜಾತ್ರೆ, ನೇಮೋತ್ಸವ ಎ. 13ರಿಂದ ಎ. 19ರ ವರೆಗೆ ಶರತ್ ಕೃಷ್ಣ ಪಡುವೆಟನ್ನಾಯರ ಮಾರ್ಗದರ್ಶನದಲ್ಲಿ ಕೊರಗಪ್ಪ ಪಂಡಿತ್ ಶಂಭೂರು ಇವರ ಪೌರೋಹಿತ್ಯದಲ್ಲಿ ಶ್ರೀ ಗಡಿ ಮೊಗೇರ ದೈವಗಳಾದ ಶ್ರೀ ಮುದ್ದ-ಕಳಲ ಮತ್ತು ದೇವಿ ಸ್ವರೂಪಿಣಿ ತನ್ನಿಮಾನಿಗ, ಧರ್ಮದೈವ ಅಣ್ಣಪ್ಪ ಸ್ವಾಮಿ ಹಾಗೂ ಸ್ವಾಮಿ ಕೊರಗಜ್ಜ ಮತ್ತು ಎರ್ನೋಡಿ ಗುಳಿಗ ದೈವಗಳ ನೇಮೋತ್ಸವ
ಹಾಗೂ ವೇ। ಮೂ। ಶ್ರೀ ಗಣಪತಿ ಮುಚ್ಚಿನ್ನಾಯ ಮಾಗಣೆ ತಂತ್ರಿಗಳವರ ಪೌರೋಹಿತ್ಯದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ನಾಗದೇವರ ಪೂಜೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಆಡಳಿತ ಮೋಕ್ತಸರ ಯು. ಬಾಬು ಮೊಗೇರ ಎರ್ನೋಡಿ ತಿಳಿಸಿದ್ದಾರೆ.

ಪ್ರತಿದಿನ ವೈದಿಕ ಕಾರ್ಯಕ್ರಮಗಳು, ವಿವಿಧ ಭಜನಾ ಮಂಡಳಿ ಗಳಿಂದ ಭಜನಾ ಸೇವೆ ನಡೆಯಲಿದೆ.. ಎ. 19ರಂದು ಬೆಳಿಗ್ಗೆ ಗಣಹೋಮ, ನಾಗ ದೇವರ ಪೂಜೆ, ಸಾರ್ವಜನಿಕ ತಂಬಿಲ ಸೇವೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮದ್ಯಾಹ್ನ ಮಹಾ ಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ ಶ್ರೀ ಧರ್ಮ ದೈವ ಅಣ್ಣಪ್ಪ ಸ್ವಾಮಿ ನೇಮೋತ್ಸವ, ರಾತ್ರಿ ದೈವಗಳ ಭಂಡಾರ ತೆಗೆಯುವುದು, ಗಡಿ ಮೊಗೇರ ದೈವ ಗಳಾದ ಶ್ರೀ ಮುದ್ದ ಕಳಲ ನೇಮೋತ್ಸವ,, ದೇವಿ ಸ್ವರೂಪಿಣಿ ಶ್ರೀ ತನ್ನಿ ಮಾನಿಗ ನೇಮೋ ತ್ಸವ, ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ, ಎರ್ನೋ ಡಿ ಗುಳಿಗ ದೈವದ ನೇಮೋತ್ಸವ ನಡೆಯಲಿದೆ.
ಎ. 20ರಂದು ಕ್ಷೇತ್ರ ಶುದ್ಧಿಕರಣ, ಸಾರ್ವಜನಿಕ ಪ್ರಾರ್ಥನೆ, ಮಹಾಪೂಜೆ, ಎ. 21ರಂದು ಬೆಳಿಗ್ಗೆ ಪೂಜೆ, ಮಧ್ಯಾಹ್ನ ಕುರಿ ತಂಬಿಲ ಸೇವೆ ಮತ್ತು ಮಂಜದ ಪೂಜೆ ಹಾಗೂ ಸಾರ್ವಜನಿಕ ಕೊರಗಜ್ಜ ಆಗೇಲು ಸೇವೆ ಜರಗಲಿದೆ ಎಂದು ಆಡಳಿತ ಮೋಕ್ತಸರ ಯು. ಬಾಬು ಮೊಗೇರ ಎರ್ನೋಡಿ ತಿಳಿಸಿದ್ದಾರೆ.