Uncategorized

ಎ.13 ರಿಂದ ಶ್ರೀ ಕ್ಷೇತ್ರ ಎನೋ೯ಡಿ ನೇಮೋತ್ಸವ ಆರಂಭ: ಎ.19 : ಧರ್ಮ ದೈವ ಅಣ್ಣಪ್ಪ ಸ್ವಾಮಿ , ಗಡಿ ಮೊಗೇರ ದೈವ ಗಳಾದ ಶ್ರೀ ಮುದ್ದ ಕಳಲ,, ದೇವಿ ಸ್ವರೂಪಿಣಿ ಶ್ರೀ ತನ್ನಿ ಮಾನಿಗ, ಸ್ವಾಮಿ ಕೊರಗಜ್ಜ ಹಾಗೂ ಎರ್ನೋ ಡಿ ಗುಳಿಗ ದೈವದ ನೇಮೋ ತ್ಸವ

ಉಜಿರೆ: ಶ್ರೀ ಆದಿ ನಾಗಬ್ರಹ್ಮ ಮೊಗರ್ಕಳ ದೈವಸ್ಥಾನ, ಸ್ವಾಮಿ ಕೊರಗಜ್ಜ ಸನ್ನಿಧಿ ಶ್ರೀ ಕ್ಷೇತ್ರ ಎರ್ನೋಡಿ ಇಲ್ಲಿ 21ನೇ ವರ್ಷದ ಎರ್ನೋಡಿ ಜಾತ್ರೆ, ನೇಮೋತ್ಸವ ಎ. 13ರಿಂದ ಎ. 19ರ ವರೆಗೆ ಶರತ್ ಕೃಷ್ಣ ಪಡುವೆಟನ್ನಾಯರ ಮಾರ್ಗದರ್ಶನದಲ್ಲಿ ಕೊರಗಪ್ಪ ಪಂಡಿತ್ ಶಂಭೂರು ಇವರ ಪೌರೋಹಿತ್ಯದಲ್ಲಿ ಶ್ರೀ ಗಡಿ ಮೊಗೇರ ದೈವಗಳಾದ ಶ್ರೀ ಮುದ್ದ-ಕಳಲ ಮತ್ತು ದೇವಿ ಸ್ವರೂಪಿಣಿ ತನ್ನಿಮಾನಿಗ, ಧರ್ಮದೈವ ಅಣ್ಣಪ್ಪ ಸ್ವಾಮಿ ಹಾಗೂ ಸ್ವಾಮಿ ಕೊರಗಜ್ಜ ಮತ್ತು ಎರ್ನೋಡಿ ಗುಳಿಗ ದೈವಗಳ ನೇಮೋತ್ಸವ
ಹಾಗೂ ವೇ। ಮೂ। ಶ್ರೀ ಗಣಪತಿ ಮುಚ್ಚಿನ್ನಾಯ ಮಾಗಣೆ ತಂತ್ರಿಗಳವರ ಪೌರೋಹಿತ್ಯದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ನಾಗದೇವರ ಪೂಜೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಆಡಳಿತ ಮೋಕ್ತಸರ ಯು. ಬಾಬು ಮೊಗೇರ ಎರ್ನೋಡಿ ತಿಳಿಸಿದ್ದಾರೆ.

ಪ್ರತಿದಿನ ವೈದಿಕ ಕಾರ್ಯಕ್ರಮಗಳು, ವಿವಿಧ ಭಜನಾ ಮಂಡಳಿ ಗಳಿಂದ ಭಜನಾ ಸೇವೆ ನಡೆಯಲಿದೆ.. ಎ. 19ರಂದು ಬೆಳಿಗ್ಗೆ ಗಣಹೋಮ, ನಾಗ ದೇವರ ಪೂಜೆ, ಸಾರ್ವಜನಿಕ ತಂಬಿಲ ಸೇವೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮದ್ಯಾಹ್ನ ಮಹಾ ಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.

ಸಂಜೆ ಶ್ರೀ ಧರ್ಮ ದೈವ ಅಣ್ಣಪ್ಪ ಸ್ವಾಮಿ ನೇಮೋತ್ಸವ, ರಾತ್ರಿ ದೈವಗಳ ಭಂಡಾರ ತೆಗೆಯುವುದು, ಗಡಿ ಮೊಗೇರ ದೈವ ಗಳಾದ ಶ್ರೀ ಮುದ್ದ ಕಳಲ ನೇಮೋತ್ಸವ,, ದೇವಿ ಸ್ವರೂಪಿಣಿ ಶ್ರೀ ತನ್ನಿ ಮಾನಿಗ ನೇಮೋ ತ್ಸವ, ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ, ಎರ್ನೋ ಡಿ ಗುಳಿಗ ದೈವದ ನೇಮೋತ್ಸವ ನಡೆಯಲಿದೆ.

ಎ. 20ರಂದು ಕ್ಷೇತ್ರ ಶುದ್ಧಿಕರಣ, ಸಾರ್ವಜನಿಕ ಪ್ರಾರ್ಥನೆ, ಮಹಾಪೂಜೆ, ಎ. 21ರಂದು ಬೆಳಿಗ್ಗೆ ಪೂಜೆ, ಮಧ್ಯಾಹ್ನ ಕುರಿ ತಂಬಿಲ ಸೇವೆ ಮತ್ತು ಮಂಜದ ಪೂಜೆ ಹಾಗೂ ಸಾರ್ವಜನಿಕ ಕೊರಗಜ್ಜ ಆಗೇಲು ಸೇವೆ ಜರಗಲಿದೆ ಎಂದು ಆಡಳಿತ ಮೋಕ್ತಸರ ಯು. ಬಾಬು ಮೊಗೇರ ಎರ್ನೋಡಿ ತಿಳಿಸಿದ್ದಾರೆ.

Related posts

ಭಾರಿ ಮಳೆಗೆ ಕಾಶಿಪಟ್ಣ ಶಾಲೆಯ ಕೋಣೆಗಳ ಮೇಲ್ಚಾವಣಿ ಕುಸಿತ: ದುರಸ್ತಿ ಕಾರ್ಯ ಮತ್ತು 4 ಹೊಸ ತರಗತಿಗಳನ್ನು ಮಂಜೂರುಗೊಳಿಸುವಂತೆ ಮನವಿ

Suddi Udaya

ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ಚಾಲನೆ

Suddi Udaya

ನೇತ್ರಾವತಿ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಗಾತ್ರದ ಮರ: ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ತೆರವು ಕಾರ್ಯ

Suddi Udaya

ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಪರಿಸರ ಕಾಳಜಿಯ ಯಶಸ್ವೀ ಪ್ರಯೋಗಗಳು

Suddi Udaya

ಬೆಳ್ತಂಗಡಿ ವಕೀಲರ ಭವನಕ್ಕೆ ಕರ್ನಾಟಕ ಲೋಕಾಯುಕ್ತ ರಿಜಿಸ್ಟರ್ ಶ್ರೀಮತಿ ಉಷಾರಾಣಿ ಭೇಟಿ

Suddi Udaya

ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ : ವಾಷಿ೯ಕ ರೂ.99.93 ಲಕ್ಷ ಲಾಭ – ಶೇ 15 ಡಿವಿಡೆಂಡ್ ಘೋಷಿಸಿದ ಅಧ್ಯಕ್ಷ ಅಜಿತ್ ಕುಮಾರ್ ಆರಿಗ

Suddi Udaya
error: Content is protected !!