ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಮತ್ತು ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಕಾರದಲ್ಲಿ ಕೊತ್ತಲಿಗೆ ಕ್ರಿಕೆಟ್ ಮ್ಯಾಚ್ ರಾಜಕೇಸರಿ ಟ್ರೋಫಿ-2025 ಎ.6ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ರಕ್ಷಕ ದಳ ಘಟಕದ ಅಧಿಕಾರಿ ಜಯಾನಂದ ಲಾಲ ನೆರವೇರಿಸಿ, ರಾಜ್ಯದಲ್ಲಿ ತನ್ನ ಸಮಾಜಸೇವೆಯ ಮೂಲಕ ವಿಶಿಷ್ಟವಾಗಿ ವಿನೂತನ ಶೈಲಿಯ ಕಾರ್ಯಕ್ರಮಗಳನ್ನು ನೆರವೇರಿಸುವಂತಹ ಏಕೈಕ ತಂಡ ಅದು ರಾಜಕೇಸರಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ದಯಾನಂದ್ ಫಸ್ಟ್‌ಕ್ಲಾಸ್ ಗುತ್ತಿಗೆದಾರರು ಲೋಕಾಪಯೋಗಿ ಬೆಳ್ತಂಗಡಿ, ಸುರೇಶ್ ಪೂಜಾರಿ ಹೇವಾ ಅಧ್ಯಕ್ಷರು ಸರ್ವೋದಯ ಫ್ರೆಂಡ್ಸ್ ಕ್ಲಬ್ ಅಟ್ಲಾಜೆ, ಕರುಣಾಕರ ಬಂಗೇರ. ಸೆಬಾಸ್ಟಿನ್ ಮುಂಡಾಜೆ, ಪ್ರೇಮ್‌ರಾಜ್ ರೋಶನ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಆಗಮಿಸಿ ಕೊತ್ತಲಿಗೆ ಬ್ಯಾಟಿನಲ್ಲಿ ಕ್ರಿಕೆಟ್ ಆಡುವ ಮೂಲಕ ತನ್ನ ಬಾಲ್ಯದ ನೆನಪನ್ನು ನೆನಪಿಸಿದರು.
ಸಮಾರೋಪದ ಅಧ್ಯಕ್ಷತೆಯನ್ನು ಉದ್ಯಮಿ ಕಿರಣ್‌ಚಂದ್ರ ಪುಷ್ಪಗಿರಿ ವಹಿಸಿ ಕೊತ್ತಲಿಗೆ ಬ್ಯಾಟ್‌ನಲ್ಲಿ ಕ್ರಿಕೆಟ್ ಆಡುವ ಮೂಲಕ ಹಿಂದಿನ ಅನುಭವವನ್ನು ಹಂಚಿಕೊಂಡರು. ದೀಪಕ್ ಅವರು ಸಮಾಜ ಸೇವೆಯ ಮೂಲಕ ಅನೇಕ ವಿನೂತನ ಶೈಲಿಯ ಕಾರ್ಯಕ್ರಮ ನಡೆಸುತ್ತಾ ಬಂದಿದ್ದಾರೆ. ಅವರು ಇನ್ನಷ್ಟು ಸಮಾಜಕ್ಕೆ ಸೇವೆಯನ್ನು ನೀಡಿ ಅನೇಕ ಪ್ರಶಸ್ತಿಯನ್ನು ಪಡೆಯಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ತುಕಾರಾಂ, ಉಪಾಧ್ಯಕ್ಷ ಸಂತೋಷ್ ಕೋಟ್ಯಾನ್, ರಾಜಕೇಸರಿ ತಂಡದ ಅಧ್ಯಕ್ಷ ಸಂದೀಪ್ ಶೆಟ್ಟಿ, ಸಂಸ್ಥಾಪಕ ದೀಪಕ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಫಲಿತಾಂಶ: ಪ್ರಥಮ: ಕುತ್ಯಾರು ಫ್ರೆಂಡ್ಸ್ ಕನ್ನಾಜೆ, ದ್ವಿತೀಯ: ಫ್ರೆಂಡ್ಸ್ ಬೆಳ್ತಂಗಡಿ, ತೃತೀಯ: ಮಹಮ್ಮಾಯಿ ಫ್ರೆಂಡ್ಸ್ ಬೆಳ್ತಂಗಡಿ, ಚತುರ್ಥ: ಸ್ವಾಮಿ ಕೊರಗಜ್ಜ ಕಣಿಯೂರು