ಗೇರುಕಟ್ಟೆ : ಎ.6.ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯಲ್ಲಿರುವ ಅಶ್ವಥ ಕಟ್ಟೆಯಲ್ಲಿ ಪ್ರಥಮ ವರ್ಷದ ಸಾರ್ವಜನಿಕ ಶನೈಶ್ಚರ ಪೂಜೆ ವೇ.ಮೂ.ರಾಘವೇಂದ್ರ ಅಸ್ರಣ್ಣ ನೇತ್ರತ್ವದಲ್ಲಿ ಎ.5 ರಂದು ಸಂಜೆ ನಡೆಯಿತು.

ರಾತ್ರಿ ಮಹಾ ಪೂಜೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ 9.30ಕ್ಕೆ: ನಾಳ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ, ವತಿಯಿಂದ ದಿ| ಶ್ರೀ ಅನಂತರಾಮ ಬಂಗಾಡಿ ವಿರಚಿತ ಕಾಡಮಲ್ಲಿಗೆ ಎಂಬ ಯಕ್ಷಗಾನ ಬಯಲಾಟ ನಡೆಯಿತು.
ಮುಂದಿನ ವರ್ಷ ಬ್ರಹ್ಮಕಲಶೋತ್ಸವವು ಜರಗಲಿರುವುದ್ದರಿಂದ ದೇವಿಗೆ ಸ್ವರ್ಣ ಕಿರೀಟವನ್ನು ಸಮರ್ಪಿಸುವ ಉದ್ಧೇಶದಿಂದ ಕಾಣಿಕೆ ಡಬ್ಬಿಯನ್ನು ಅನಾವರಣಗೊಳಿಸಿ,ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ.ರಾಘವೇಂದ್ರ ಅಸ್ರಣ್ಣ ಶುಭ ಹಾರೈಸಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್ ಕುಮಾರ್ , ಸದಸ್ಯರಾದ. ರಾಘವ ಎಚ್ ನೀನಕುಮಾರ್. ಮೋಹಿನಿ. ಹೇಮಂತ್ ಕುಮಾರ್. ಶರತ್ ಕುಮಾರ್. ಕೆ ಹರೀಶ್.,ರಿಟಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಯಾದವ ಗೌಡ ಹಾಗೂಸದಸ್ಯರು, ಭಜನಾ ಮಂಡಳಿ ಅಧ್ಯಕ್ಷ ಗಣೇಶ್ ಗೌಡಮತ್ತು ಮತ್ತು ಸದಸ್ಯರು . ಮಾತೃ ಮಂಡಳಿ ಅಧ್ಯಕ್ಷರಾದ ಮಮತಾ ಶೆಟ್ಟಿ ಹಾಗೂ ಸದಸ್ಯರು ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.