April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಎಕ್ಸಲೆಂಟ್ ಮೂಡುಬಿದಿರೆ ವಿದ್ಯಾರ್ಥಿಗಳ ರ‍್ಯಾಂಕ್ ಸಾಧನೆ

ಮೂಡುಬಿದಿರೆ: 2024-25 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಮಾ.1 ರಿಂದ ಮಾ.20 ರ ವರಗೆ ನಡೆದಿದ್ದು, ಇದೀಗ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯಮಟ್ಟದಲ್ಲಿ ವಿಜ್ಞಾನ ವಿಭಾಗದಲ್ಲಿ ನಾಲ್ಕನೇ ಸ್ಥಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ನಾಲ್ಕನೇ ಸ್ಥಾನದೊಂದಿಗೆ ೧೩ ಸ್ಥಾನಗಳನ್ನು ಬಾಚಿಕೊಳ್ಳುವ ಮೂಲಕ ಮೂಡುಬಿದಿರೆ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು ಉತ್ತಮ ಫಲಿತಾಂಶ ದಾಖಲಿಸಿ ಮತ್ತೊಮ್ಮೆ ಗುಣಮಟ್ಟದ ಶಿಕ್ಷಣವನ್ನು ಸಾಬೀತುಪಡಿಸಿದೆ.
ಪರೀಕ್ಷೆ ಬರೆದ 953 ವಿದ್ಯಾರ್ಥಿಗಳಲ್ಲಿ 13 ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದ ರ‍್ಯಾಂಕ್ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನಗಳನ್ನು ಪಡೆದಿದ್ದಾರೆ.


ಜೈನ ಕಾಶಿಯಾದ ಮೂಡುಬಿದಿರೆ ಶಿಕ್ಷಣ ಕಾಶಿಯಾಗಿ ರೂಪುಗೊಂಡಿದ್ದು, ಎಕ್ಸಲೆಂಟ್ ವಿದ್ಯಾ ಸಂಸ್ಥೆ ಕಳೆದ ಹದಿಮೂರು ವರ್ಷಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ಸಲ್ಲಿಸುತ್ತಿದ್ದು, ಶಿಸ್ತು ಶಂಸ್ಕಾರ ಬದ್ಧ ಜೀವನದ ಧ್ಯೇಯೋದ್ದೇಶವನ್ನು ಇಟ್ಟುಕೊಂಡು ಗುಣಮಟ್ಟದ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತಿದೆ. ದ್ವಿತೀಯ ಪದವಿಪೂರ್ವ ಶಿಕ್ಷಣದಲ್ಲಿ ನಿರಂತರವಾಗಿ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸುತ್ತಾ ಬಂದಿರುತ್ತದೆ.


ವಿಜ್ಞಾನ ವಿಭಾಗದಲ್ಲಿ ಪ್ರಮುಖ್ ತುಳುಪುಳೆ (೫೯೬) ೪ನೇ ಸ್ಥಾನ, ಬೆಳ್ತಂಗಡಿಯ ರೋಹಿತ್ ಕಾಮತ್ (೫೯೩) ೭ನೇ ಸ್ಥಾನ, ಬೆಳ್ತಂಗಡಿಯ ಶಿಶಿರ್ ಎಚ್ ಶೆಟ್ಟಿ(೫೯೩) ೭ನೇ ಸ್ಥಾನ, ಥಿಯಾನ್ ಮಹೇಶ್ ಸೋನ್ಸ್(೫೯೩) ೭ನೇ ಸ್ಥಾನ, ವರುಣ್ ವಿ (೫೯೩) ೭ನೇ ಸ್ಥಾನ, ಸುಜನಾ (೫೯೧) ೯ನೇ ಸ್ಥಾನ, ಕೆ ಸುಮಾ ಪೈ (೫೯೧) ೯ನೇ ಸ್ಥಾನ, ಧನಾಂಶ್ ವಿ(೫೯೦) ೧೦ನೇ ಸ್ಥಾನ, ದಿವ್ಯೇಶ್ ಶರ್ಮಾ (೫೯೦) ೧೦ನೇ ಸ್ಥಾನ, ಎಡುಲಾ ಓಂಸಾಯಿ(೫೯೦) ೧೦ನೇ ಸ್ಥಾನ ಪಡೆದಿರುತ್ತಾರೆ.


ವಾಣಿಜ್ಯ ವಿಭಾಗದಲ್ಲಿ ಅನೂಪ್ ಶಾನ್ ಗೋಮ್ಸ್ (೫೯೬) ರಾಜ್ಯಕ್ಕೆ ೪ನೇ ಸ್ಥಾನ, ಅದಿತಿ ಕೆ (೫೯೪) ೬ನೇ ಸ್ಥಾನ, ಆದಿತ್ಯ÷ಶೆಟ್ಟಿ (೫೯೦) ೧೦ನೇ ಸ್ಥಾನವನ್ನು ಪಡೆದಿದ್ದು÷ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ.


ಪರೀಕ್ಷೆಗೆ ಹಾಜರಾದ 953 ವಿದ್ಯಾರ್ಥಿಗಳಲ್ಲಿ 595 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಶೇ. ನೂರು ಫಲಿತಾಂಶ ದಾಖಲಾಗಿದ್ದು ಸಂಸ್ಥೆಯ241 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿರುತ್ತಾರೆ. ಸಂಸ್ಥೆಯ ಒಟ್ಟು ಫಲಿತಾಂಶ ಶೇ.೯೯.೮೯೫ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ವಿದ್ಯಾರ್ಥಿಗಳ ಅತ್ಯುತ್ತಮ ಫಲಿತಾಂಶಕ್ಕೆ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ನಿರ್ದೇಶಕರು, ಪ್ರಾಂಶುಪಾಲರು, ಉಪನ್ಯಾಸಕ ಮತ್ತು ಉಪನ್ಯಾಸಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದ್ದಾರೆ.

Related posts

ಬಳೆಂಜ: ಕಾಪಿನಡ್ಕದಲ್ಲಿ ಪ್ರವಾಸಿಗರ ಕಾರು ಧರೆಗೆ ಡಿಕ್ಕಿ; ಚಾಲಕ ಸೇರಿದಂತೆ ಪ್ರಯಾಣಿಕರಿಗೆ ಗಾಯ

Suddi Udaya

ತಾಲೂಕಿನ ಆಯ್ದ ಯುವಕ – ಯುವತಿ ಮಂಡಲಗಳಿಗೆ ಕ್ರೀಡಾ ಕಿಟ್ ವಿತರಣೆ

Suddi Udaya

ನಾವರ ,ಕುದ್ಯಾಡಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ

Suddi Udaya

ನ.13: ಬೆಳ್ತಂಗಡಿಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ದೀಪಾವಳಿ ದೋಸೆ ಹಬ್ಬ ಕಾರ್ಯಕ್ರಮ

Suddi Udaya

ಎಸ್ ಡಿ ಎಂ ಬೆಳ್ತಂಗಡಿಯಲ್ಲಿ “ಪರಿಸರ ಸ್ನೇಹಿ ಸ್ಕೌಟ್ ಗಣಪತಿ ಆಚರಣೆ

Suddi Udaya

ಅಯೋಧ್ಯೆ ಪ್ರಭು ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಹೆಗ್ಗಡೆ ಭಾಗಿ

Suddi Udaya
error: Content is protected !!