April 21, 2025
Uncategorized

ಕುತ್ಲೂರಿನಲ್ಲಿ ಗೂಡ್ಸ್ ವಾಹನ ರಿಕ್ಷಾಕ್ಕೆ ಡಿಕ್ಕಿ: ಪ್ರಯಾಣಿಕ ರಾಜೇಂದ್ರ ಆಳ್ವಾರಿಗೆ ಗಾಯ

ಕುತ್ಲೂರು : ಇಲ್ಲಿನ ಕುತ್ಲೂರು ಎಂಬಲ್ಲಿ ಗುರುವಾಯನಕೆರೆ – ನಾರಾವಿ ರಾಜ್ಯ ಹೆದ್ದಾರಿಯಲ್ಲಿ ನಾರಾವಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಬರುತ್ತಿದ್ದ ಗೂಡ್ಸ್ ವಾಹನ ರಿಕ್ಷಾಕ್ಕೆ ಡಿಕ್ಕಿ ಹೊಡೆದು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಗಾಯಗೊಂಡು ಮೂಡುಬಿದಿರೆ ಆಸ್ಪತ್ರೆಗೆ ದಾಖಲಾದ ಘಟನೆ ಎ. 10ರಂದು ನಡೆದಿದೆ.

ಗೂಡ್ಸ್ ವಾಹನದ ಚಾಲಕರಾದ ಶಶಿಧರ ದೇವಾಡಿಗ ಎಂಬವರು ದುಡುಕುತನದಿಂದ ಬೇರೆ ವಾಹನಗಳನ್ನು ಓವರ ಟೇಕ್‌ ಮಾಡಿ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಗುರುವಾಯನಕೆರೆ ಕಡೆಯಿಂದ ಹೋಗುತ್ತಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ, ರಾಜೇಂದ್ರ ಆಳ್ವಾ ರವರಿಗೆ ಗಾಯ ಉಂಟಾಗಿದ್ದಲ್ಲದೇ ಎರಡು ವಾಹನಗಳು ಜಖಂ ಗೊಂಡಿದೆ. ಗಾಯಾಳು ರಾಜೇಂದ್ರ ಆಳ್ವಾರವರು ಮೂಡಬಿದ್ರೆ ಆಳ್ವಾಸ್‌ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಮಡಂತ್ಯಾರು ಪುಂಜಾಲಕಟ್ಟೆ ಎಲ್ಲಾ ಸಂಘಟನೆಗಳ ಸಹಕಾರದಲ್ಲಿ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ಹೆದ್ದಾರಿಯ ಶ್ರಮದಾನ

Suddi Udaya

ಬೆಳ್ತಂಗಡಿ: ಮಾದಕವಸ್ತು ಸೇವನೆ ಹಾಗೂ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ

Suddi Udaya

ಆದಿವಾಸಿ ಸಮುದಾಯದ ಎದುರಿಸುತ್ತಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಮಹತ್ವದ ಸಭೆ ಕರೆದಿರುವ ರಾಜ್ಯ ಸರ್ಕಾರ

Suddi Udaya

ಸೋಣಂದೂರು: ಕೊಲ್ಪದಬೈಲು ಬಳಿ ರಸ್ತೆಗೆ ಬಿದ್ದ ಬೃಹತ್ ಗಾತ್ರದ ಮರ: ಸ್ಥಳೀಯರಿಂದ ತೆರವು ಕಾರ್ಯ

Suddi Udaya

ಬೆಳ್ತಂಗಡಿ ಅ.ಭಾ.ಸಾ.ಪ. ಸಮಿತಿ ಹಾಗೂ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ನೇತೃತ್ವದಲ್ಲಿ ನೀರಿನ ಸದ್ಬಳಕೆ ಕುರಿತು ಕವಿಗೋಷ್ಠಿ

Suddi Udaya

ಇಳಂತಿಲ ಗ್ರಾ.ಪಂ. ಉಪಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀಮತಿ ಮೀನಾಕ್ಷಿ ಯವರ ಪರವಾಗಿ ಮನೆ ಮನೆ ಭೇಟಿ ಅಭಿಯಾನ

Suddi Udaya
error: Content is protected !!