ಮಡಂತ್ಯಾರು: ಮಡಂತ್ಯಾರು ಉಪ್ಪಿನಂಗಡಿಗೆ ಸಾಗುವ ರಸ್ತೆಯ ಮಡಂತ್ಯಾರು ಶಿಶು ಮಂದಿರ ಹತ್ತಿರ ಮಾರಿಗುಡಿ ಶ್ರೀರಾಮನಗರ ಕ್ರಾಸ್ ಬಳಿಯಲ್ಲಿ ಬಂಗೇರ ಕಟ್ಟೆ ಹಲವು ಕಡೆಗಳಲ್ಲಿ ಮರಗಳು ರಸ್ತೆಗೆ ಬಾಗಿಕೊಂಡಿದ್ದು ಅದರಲ್ಲೂ ಕೆಲವು ಕಡೆ ಒಣಗಿದ ಬಾರಿ ಗಾತ್ರದ ಮರಗಳು ಇನ್ನೇನು ಗಾಳಿ ಮಳೆಗೆ ಬೀಳುವ ಸ್ಥಿತಿಯಲ್ಲಿದೆ.


ಮಡಂತ್ಯಾರು ಶಿಶು ಮಂದಿರದ ಬಳಿಯಲ್ಲಿ ಸ್ವಲ್ಪ ಮುಂದಕ್ಕೆ ಎ.8 ರಂದು ಸಂಜೆ ಸುರಿದ ಗಾಳಿ ಮಳೆಗೆ ಒಣಗಿದ ಬಾರಿ ಗಾತ್ರದ ಮರದ ಕೊಂಬೆ ಮಡಂತ್ಯಾರು ಕಡೆಯಿಂದ ಉಪ್ಪಿನಂಗಡಿ ಕಡೆ ಸಾಗುವ ಅಟೋ ರಿಕ್ಷಾದ ಮೇಲೆ ಬಿದ್ದು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಶ್ರೀರಾಮ ನಗರ ಕ್ರಾಸ್ ಸಮೀಪ ವಿದ್ಯುತ್ ತಂತಿಗಳ ಮೇಲೆ ಒಣಗಿದ ಮರ ತಂತಿಯ ಬೀಳುವ ಸ್ಥಿತಿಯಲ್ಲಿದೆ ಕೆಲವು ತಿಂಗಳುಗಳಲ್ಲಿ ಮಳೆಗಾಲ ಆರಂಭವಾಗಲಿದ್ದು ಬಾರಿ ಪ್ರಮಾಣದ ಗಾಳಿ ಮಳೆಗೆ ಅಪಾಯಕಾರಿ ಮರಗಳು ರಸ್ತೆಗೆ ಬಿದ್ದು ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಕೂಡಲೇ ಸಂಬಂಧಪಟ್ಟ ಇಲಾಖೆಗಳು ಇತ್ತ ಕಡೆ ಗಮನ ಹರಿಸಿ ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.