ನಾರಾವಿ: ನಾರಾವಿಯ ಮಾಪಾಲು ಮೀಸಲು ಅರಣ್ಯ ಪ್ರದೇಶದ ಕೆಳಭಾಗದಲ್ಲಿ ಕಳೆದ ಎರಡು ದಿನಗಳಿಂದ ಅನಾಮದೇಯ ಮಾರುತಿ ೮೦೦ ಕಾರುವೊಂದು ನಿಂತಿರುವುದು ಅನುಮಾನಕ್ಕೆ ಎಡೆಮಾಡಿದೆ.

ಎರಡು ದಿನದ ಹಿಂದೆ ರಾತ್ರಿ 12 ಗಂಟೆಗೆ ಕಾರು ಪೆಟ್ರೋಲ್ ಖಾಲಿಯಾಗಿ ಬಾಕಿಯಾಗಿದೆ ಎಂದು ಸ್ಥಳೀಯ ನಿವಾಸಿಯೊಬ್ಬರ ಮನೆಯಲ್ಲಿ ಪೆಟ್ರೋಲ್ ಕುರಿತು ವಿಚರಿಸಿದ್ದರು. ಕಾರಿನಲ್ಲಿದ್ದ ಇರ್ವರು ಆದರೆ ಅಂದು ಕಾಣ ಸಿಕ್ಕಿದವರು ಎರಡು ದಿನ ಕಳೆದರೂ ಪತ್ತೆಯಾಗದಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಗೆ ನಾರಾವಿ ಗ್ರಾ.ಪಂ.ಸದಸ್ಯ ಉದಯ್ ಹೆಗ್ಡೆ ತಿಳಿಸಿದ್ದಾರೆ.