ಕುತ್ಲೂರು : ಇಲ್ಲಿನ ಕುತ್ಲೂರು ಎಂಬಲ್ಲಿ ಗುರುವಾಯನಕೆರೆ – ನಾರಾವಿ ರಾಜ್ಯ ಹೆದ್ದಾರಿಯಲ್ಲಿ ನಾರಾವಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಬರುತ್ತಿದ್ದ ಗೂಡ್ಸ್ ವಾಹನ ರಿಕ್ಷಾಕ್ಕೆ ಡಿಕ್ಕಿ ಹೊಡೆದು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಗಾಯಗೊಂಡು ಮೂಡುಬಿದಿರೆ ಆಸ್ಪತ್ರೆಗೆ ದಾಖಲಾದ ಘಟನೆ ಎ. 10ರಂದು ನಡೆದಿದೆ.
ಗೂಡ್ಸ್ ವಾಹನದ ಚಾಲಕರಾದ ಶಶಿಧರ ದೇವಾಡಿಗ ಎಂಬವರು ದುಡುಕುತನದಿಂದ ಬೇರೆ ವಾಹನಗಳನ್ನು ಓವರ ಟೇಕ್ ಮಾಡಿ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಗುರುವಾಯನಕೆರೆ ಕಡೆಯಿಂದ ಹೋಗುತ್ತಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ, ರಾಜೇಂದ್ರ ಆಳ್ವಾ ರವರಿಗೆ ಗಾಯ ಉಂಟಾಗಿದ್ದಲ್ಲದೇ ಎರಡು ವಾಹನಗಳು ಜಖಂ ಗೊಂಡಿದೆ. ಗಾಯಾಳು ರಾಜೇಂದ್ರ ಆಳ್ವಾರವರು ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.