38.6 C
ಪುತ್ತೂರು, ಬೆಳ್ತಂಗಡಿ
March 6, 2026
Uncategorized

ಮಡಂತ್ಯಾರು ರಸ್ತೆಯ ಬದಿಯಲ್ಲಿ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆೆ ಸಾರ್ವಜನಿಕರ ಒತ್ತಾಯ

ಮಡಂತ್ಯಾರು: ಮಡಂತ್ಯಾರು ಉಪ್ಪಿನಂಗಡಿಗೆ ಸಾಗುವ ರಸ್ತೆಯ ಮಡಂತ್ಯಾರು ಶಿಶು ಮಂದಿರ ಹತ್ತಿರ ಮಾರಿಗುಡಿ ಶ್ರೀರಾಮನಗರ ಕ್ರಾಸ್ ಬಳಿಯಲ್ಲಿ ಬಂಗೇರ ಕಟ್ಟೆ ಹಲವು ಕಡೆಗಳಲ್ಲಿ ಮರಗಳು ರಸ್ತೆಗೆ ಬಾಗಿಕೊಂಡಿದ್ದು ಅದರಲ್ಲೂ ಕೆಲವು ಕಡೆ ಒಣಗಿದ ಬಾರಿ ಗಾತ್ರದ ಮರಗಳು ಇನ್ನೇನು ಗಾಳಿ ಮಳೆಗೆ ಬೀಳುವ ಸ್ಥಿತಿಯಲ್ಲಿದೆ.

ಮಡಂತ್ಯಾರು ಶಿಶು ಮಂದಿರದ ಬಳಿಯಲ್ಲಿ ಸ್ವಲ್ಪ ಮುಂದಕ್ಕೆ ಎ.8 ರಂದು ಸಂಜೆ ಸುರಿದ ಗಾಳಿ ಮಳೆಗೆ ಒಣಗಿದ ಬಾರಿ ಗಾತ್ರದ ಮರದ ಕೊಂಬೆ ಮಡಂತ್ಯಾರು ಕಡೆಯಿಂದ ಉಪ್ಪಿನಂಗಡಿ ಕಡೆ ಸಾಗುವ ಅಟೋ ರಿಕ್ಷಾದ ಮೇಲೆ ಬಿದ್ದು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಶ್ರೀರಾಮ ನಗರ ಕ್ರಾಸ್ ಸಮೀಪ ವಿದ್ಯುತ್ ತಂತಿಗಳ ಮೇಲೆ ಒಣಗಿದ ಮರ ತಂತಿಯ ಬೀಳುವ ಸ್ಥಿತಿಯಲ್ಲಿದೆ ಕೆಲವು ತಿಂಗಳುಗಳಲ್ಲಿ ಮಳೆಗಾಲ ಆರಂಭವಾಗಲಿದ್ದು ಬಾರಿ ಪ್ರಮಾಣದ ಗಾಳಿ ಮಳೆಗೆ ಅಪಾಯಕಾರಿ ಮರಗಳು ರಸ್ತೆಗೆ ಬಿದ್ದು ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಕೂಡಲೇ ಸಂಬಂಧಪಟ್ಟ ಇಲಾಖೆಗಳು ಇತ್ತ ಕಡೆ ಗಮನ ಹರಿಸಿ ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Related posts

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸತ್ಯನಪಲ್ಕೆ ಶಾಲೆ ಮಕ್ಕಳಿಗೆ ಊಟದ ತಟ್ಟೆ ವಿತರಣೆ

Suddi Udaya

ಬೆಳ್ತಂಗಡಿ: ಸಮಾಜ ಸೇವಕ ಡಾ. ರವಿ ಪೂಜಾರಿ ಕಕ್ಕೆಪದವುರವರಿಗೆ ಕಾಯಕ ಯೋಗಿ ಪ್ರಶಸ್ತಿ ರಾಜ್ಯ ಪ್ರಶಸ್ತಿ ಪ್ರದಾನ

Suddi Udaya

ಸೇವಾಭಾರತಿ ನೂತನ ಕಟ್ಟಡ ನಿರ್ಮಾಣಕ್ಕೆ ಕನ್ಯಾಡಿ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯಿಂದ ದೇಣಿಗೆ

Suddi Udaya

ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ಗಾಲಿಕುರ್ಚಿ ಜಾಥಾ

Suddi Udaya

ಹಲ್ಲೆಗೆ ಯತ್ನ: ಸೌಜನ್ಯ ತಾಯಿ ಕುಸುಮಾವತಿರವರಿಂದ ಬೆಳ್ತಂಗಡಿ ಠಾಣೆಗೆ ದೂರು

Suddi Udaya

ಸೌತಡ್ಕ ಮಹಾಗಣಪತಿ ಕ್ಷೇತ್ರಕ್ಕೆ ಕೃಷಿ ಸಚಿವ ಚೆಲುವರಾಯಸ್ವಾಮಿ ಭೇಟಿ : ವಿಶೇಷ ಪೂಜೆ ಸಲ್ಲಿಸಿದ ಸಚಿವ ದಂಪತಿ

Suddi Udaya
error: Content is protected !!