
ಬೆಳ್ತಂಗಡಿ: ತಾಲೂಕಿನ ಪ್ರಸಿದ್ದ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಖರೀದಿಸಿದ್ದಾರೆ.

ಸುಮಂತ್ ಕುಮಾರ್ ಜೈನ್ ಅವರ ಹುಟ್ಟುಹಬ್ಬದ ದಿನದಂದೇ ರೂ 1.50 ಕೋಟಿ ಬೆಲೆಯ ಬಿಳಿ ಬಣ್ಣದ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಬಂದಿದ್ದು ಹುಟ್ಟು ಹಬ್ಬಕ್ಕೆ ಇನ್ನಷ್ಟು ಮೆರಗು ತಂದಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಬೆಳ್ತಂಗಡಿಯಲ್ಲಿ ಮೊದಲನೆಯದಾಗಿ ಸುಮಂತ್ ಕುಮಾರ್ ಜೈನ್ ಖರೀದಿ ಮಾಡಿದ್ದಾರೆ.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಸುಮಂತ್ ಕುಮಾರ್ ಜೈನ್ ಅವರಿಗೆ ಲ್ಯಾಂಡ್ ರೋವರ್ ಪ್ರೋಡಕ್ಟ್ ಸ್ಪೆಷಾಲಿಸ್ಟ್ ಇಮ್ರಾನ್ ಅವರು ಡಿಫೆಂಡರ್ ಕೀ ಹಸ್ತಾಂತರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು,ಉಪನ್ಯಾಸಕ ವೃಂದದವರು, ಸಿಬ್ಬಂದುಗಳು, ಪೋಷಕರು,ವಿದ್ಯಾರ್ಥಿಗಳು ಸುಮಂತ್ ಕುಮಾರ್ ಜೈನ್ ಅವರಿಗೆ ಶುಭಾಶಯ ಕೋರಿದರು.