ಕಳಿಯ ಗ್ರಾಮ ಪಂಚಾಯತ್ ನ ಮಾಸಿಕ ಸಾಮಾನ್ಯ ಸಭೆಯು ಎ. 9 ರಂದು ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷ ದಿವಾಕರ ಎಮ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಿಬ್ಬಂದಿಗಳ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭಗೊಂಡಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ೦ತೋಷ್ ಪಾಟೀಲ್ ಸರಕಾರದ ಸುತ್ತೋಲೆಯನ್ನು ಓದಿ ಹೇಳಿದರು. ಕಾರ್ಯದರ್ಶಿ ಕುಂಙ ಕೆ ಸಾರ್ವಜನಿಕರ ಅರ್ಜಿಗಳನ್ನು ಸಭೆಗೆ ಓದಿ ಹೇಳಿದರು.
ಉದ್ಯೋಗ ಖಾತರಿಯ ಕೆಲಸಗಳ ಬಗ್ಗೆ ಚರ್ಚಿಸಲಾಯಿತು. ನರೇಗಾ ಅಭಿಯಂತರರಾದ ಶರಣ್ ರೈ ಸಭೆಗೆ ಮಾಹಿತಿ ನೀಡಿದರು. ಪ್ರಧಾನ ಮಂತ್ರಿ ಅವಾಝ್ ವಸತಿ ಯೋಜನೆಗೆ ಫಲಾನುಭವಿಗಳು ಸಲ್ಲಿಸಿರುವ ಅರ್ಜಿಗಳ ಕುರಿತು ಪರಿಶೀಲಿಸಲಾಯಿತು. ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೆಲವು ಹದಗೆಟ್ಟ ಪಂಚಾಯತ್ ರಸ್ತೆಗಳನ್ನು ಮಳೆಗಾಲಕ್ಕೆ ಮೊದಲು ಪಂಚಾಯತ್ ವತಿಯಿಂದ ಸರಿಪಡಿಸುವಂತೆ ಸದಸ್ಯರು ಆಗ್ರಹಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಶ್ರೀಮತಿ ಇಂದಿರಾ ಬಿ. ಸದಸ್ಯರುಗಳಾದ ಸುಧಾಕರ ಮಜಲು, ಅಬ್ದುಲ್ ಕರೀಮ್, ಶ್ರೀಮತಿ ಮೋಹಿನಿ, ಶ್ರೀಮತಿ ಸುಭಾಷಿಣಿ, ಲತೀಫ್ ಪರಿಮ, ಹರೀಶ್ ಕುಮಾರ್, ಶ್ರೀಮತಿ ಕುಸುಮ ಎನ್ ಬಂಗೇರ, ಶ್ರೀಮತಿ ಮರೀಟಾ ಪಿಂಟೋ, ವಿಜಯ ಗೌಡ, ಯಶೋದರ ಶೆಟ್ಟಿ, ಶ್ರೀಮತಿ ಪುಷ್ಪಾ, ಶ್ರೀಮತಿ ಶ್ವೇತಾ ಮತ್ತು ಸಿಬ್ಬಂದಿಗಳಾದ ಶ್ರೀಮತಿ ಸುಚಿತ್ರಾ, ಶ್ರೀಮತಿ ಶಶಿಕಲಾ, ಶ್ರೀಮತಿ ಪ್ರಮೀಳಾ, ರವಿ ಎಚ್, ಶ್ರೀಮತಿ ನಂದಿನಿ ಪಿ ರೈ ಸುರೇಶ್ ಗೌಡ, ಕು.ಮಾನಸ ಹಾಜರಿದ್ದರು.