23.3 C
ಪುತ್ತೂರು, ಬೆಳ್ತಂಗಡಿ
April 19, 2025
Uncategorized

ಮಡಂತ್ಯಾರು ರಸ್ತೆಯ ಬದಿಯಲ್ಲಿ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆೆ ಸಾರ್ವಜನಿಕರ ಒತ್ತಾಯ

ಮಡಂತ್ಯಾರು: ಮಡಂತ್ಯಾರು ಉಪ್ಪಿನಂಗಡಿಗೆ ಸಾಗುವ ರಸ್ತೆಯ ಮಡಂತ್ಯಾರು ಶಿಶು ಮಂದಿರ ಹತ್ತಿರ ಮಾರಿಗುಡಿ ಶ್ರೀರಾಮನಗರ ಕ್ರಾಸ್ ಬಳಿಯಲ್ಲಿ ಬಂಗೇರ ಕಟ್ಟೆ ಹಲವು ಕಡೆಗಳಲ್ಲಿ ಮರಗಳು ರಸ್ತೆಗೆ ಬಾಗಿಕೊಂಡಿದ್ದು ಅದರಲ್ಲೂ ಕೆಲವು ಕಡೆ ಒಣಗಿದ ಬಾರಿ ಗಾತ್ರದ ಮರಗಳು ಇನ್ನೇನು ಗಾಳಿ ಮಳೆಗೆ ಬೀಳುವ ಸ್ಥಿತಿಯಲ್ಲಿದೆ.

ಮಡಂತ್ಯಾರು ಶಿಶು ಮಂದಿರದ ಬಳಿಯಲ್ಲಿ ಸ್ವಲ್ಪ ಮುಂದಕ್ಕೆ ಎ.8 ರಂದು ಸಂಜೆ ಸುರಿದ ಗಾಳಿ ಮಳೆಗೆ ಒಣಗಿದ ಬಾರಿ ಗಾತ್ರದ ಮರದ ಕೊಂಬೆ ಮಡಂತ್ಯಾರು ಕಡೆಯಿಂದ ಉಪ್ಪಿನಂಗಡಿ ಕಡೆ ಸಾಗುವ ಅಟೋ ರಿಕ್ಷಾದ ಮೇಲೆ ಬಿದ್ದು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಶ್ರೀರಾಮ ನಗರ ಕ್ರಾಸ್ ಸಮೀಪ ವಿದ್ಯುತ್ ತಂತಿಗಳ ಮೇಲೆ ಒಣಗಿದ ಮರ ತಂತಿಯ ಬೀಳುವ ಸ್ಥಿತಿಯಲ್ಲಿದೆ ಕೆಲವು ತಿಂಗಳುಗಳಲ್ಲಿ ಮಳೆಗಾಲ ಆರಂಭವಾಗಲಿದ್ದು ಬಾರಿ ಪ್ರಮಾಣದ ಗಾಳಿ ಮಳೆಗೆ ಅಪಾಯಕಾರಿ ಮರಗಳು ರಸ್ತೆಗೆ ಬಿದ್ದು ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಕೂಡಲೇ ಸಂಬಂಧಪಟ್ಟ ಇಲಾಖೆಗಳು ಇತ್ತ ಕಡೆ ಗಮನ ಹರಿಸಿ ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Related posts

ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಹಿರಿಯ ಸಮಾಜಸೇವಕ ದಿ| ಬಿ.ಉಮೇಶ್ ಕುಲಾಲ್ ಮಂಚಿ ರವರ ಪುಣ್ಯಸ್ಮರಣೆ

Suddi Udaya

ಹತ್ಯಡ್ಕ ನಿವಾಸಿ ಯಮುನಾ ನಿಧನ

Suddi Udaya

ಕೆಪಿಎಸ್ ಪುಂಜಾಲಕಟ್ಟೆ: ಆಟಿ ತಿಂಗೊಲ್ಡ್ ಜೋಕ್ಲೆ ಗೇನ

Suddi Udaya

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Suddi Udaya

ಎಂ.ಎಸ್ಸಿ ಸ್ನಾತಕೋತ್ತರ ಪರೀಕ್ಷೆ: ಅನಾಲಿಟಿಕಲ್‌ ಕೆಮಿಸ್ಟ್ರಿ ವಿಭಾಗದಲ್ಲಿ ಪ್ರಿಮಲ್ ನಿಲ್ಮಾ ರೊಡ್ರಿಗಸ್ ರವರಿಗೆ ಪ್ರಥಮ ರ್ಯಂಕ್

Suddi Udaya

ನಾರಾವಿ ಮಾಂಡೋವಿ ಮೋಟಾರ್‍ಸ್ ಶೋರೂಮ್ ನಲ್ಲಿ ಡಾಜ್ಲಿಂಗ್‌ ನ್ಯೂ ಡಿಜೈರ್ ಕಾರು ಮಾರುಕಟ್ಟೆಗೆ

Suddi Udaya
error: Content is protected !!