April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರೋತ್ಸವದ ಪ್ರಯುಕ್ತ ನಡ- ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಶ್ರಮದಾನ

ಲಾಯಿಲ: ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರೆ ಉತ್ಸವದ ಪ್ರಯುಕ್ತ ನಡ- ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಶ್ರಮದಾನ ನಡೆಯಿತು.

ದೇವಸ್ಥಾನ ದ ಆಡಳಿತ ಮಂಡಳಿಯ ಮ್ಯಾನೇಜರ್ ಪ್ರಶಾಂತ್ ರವರ ಮನವಿಯ ಮೇರೆಗೆ ಶೌರ್ಯ ತಂಡದ ಸ್ವಯಂ ಸೇವಕರಾದ ಒಲ್ವಿನ್ ಡಿಸೋಜ, ಸುರೇಶ್, ರವೀಂದ್ರನಾಥ, ಜಯರಾಮ್ ಹರೀಶ್, ಜೀವನ್ ಡಿಸೋಜ ಲೀಲಾ, ಅರ್ವಿನ್ ಮಿರಾಂದ, ಸಂಯೋಜಕರಾದ ವಸಂತಿ, ಇವರೆಲ್ಲರೂ ಸೇರಿ ಬಹಳ ಶ್ರಮಪಟ್ಟು ಕೆಲಸ ನಿರ್ವಹಣೆ ಮಾಡಿದರು.

ಶ್ರೀ ದುರ್ಗಾ ಮಾತೆಯ ಸನ್ನಿದಿಯಲ್ಲಿ ಸೇವೆ ಗೈದ ಎಲ್ಲರಿಗೂ ದೇವಸ್ಥಾನದ ಅರ್ಚಕ ಗಣೇಶ್ ಶರ್ಮಾ ರವರು ಇನ್ನೂ ಹೆಚ್ಚಿನ ಸೇವೆ ನೀಡುವ ಶಕ್ತಿಯನ್ನು ದುರ್ಗಾ ಮಾತೆ ನೀಡಲಿ ಎಂದು ಪ್ರಾರ್ಥಿಸಿ ಪ್ರಸಾದವನ್ನು ನೀಡಿದರು. ದೇವಸ್ಥಾನ ದ ಆಡಳಿತ ಮೊಕ್ತೇಸರರಾದ ಧನಂಜಯ ಅಜ್ರಿ , ಮ್ಯಾನೇಜರ್ ಪ್ರಶಾಂತ್ ರವರು ಎಲ್ಲರನ್ನು ಅಭಿನಂದಿಸಿ ಸ್ವಯಂ ಸೇವಕರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Related posts

ರೆಖ್ಯಕ್ಕೆ ಸಂಸದ ಕ್ಯಾ| ಬ್ರಿಜೇಶ್ ಚೌಟ ಭೇಟಿ: ವಿವಿಧ ಕಾಮಗಾರಿಗಳ ಪರಿಶೀಲನೆ

Suddi Udaya

ಮೂಡುಕೋಡಿ ‘ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಮಾದರಿ ಕಾರ್ಯ

Suddi Udaya

ತಾಲೂಕು ಮಟ್ಟದ ಕ್ರೀಡಾಕೂಟ: ಮಚ್ಚಿನ ಸರ್ಕಾರಿ ಪ್ರೌಢಶಾಲೆಗೆ ಪ್ರಶಸ್ತಿ

Suddi Udaya

ಕಾಯರ್ತಡ್ಕ: ಗಾಳಿ ಮಳೆಗೆ ಸೋಲಾರ್ ಮೇಲೆ ಮರಬಿದ್ದು ನಷ್ಟ

Suddi Udaya

ಹಾಡುಹಗಲೇ ಚರ್ಚ್ ರೋಡ್ ಬಳಿ ನಿಲ್ಲಿಸಿದ್ದ ಬೈಕ್ ನಾಪತ್ತೆ

Suddi Udaya

ಫೆ.8: ಉಜಿರೆ-ಬೆಳ್ತಂಗಡಿ ಟಿಬಿ ಕ್ರಾಸ್‌ನಲ್ಲಿ ಮಹಾಗಣಪತಿ ಗ್ರಾನೈಟ್ಸ್ & ಟೈಲ್ಸ್ ಶುಭಾರಂಭ

Suddi Udaya
error: Content is protected !!