ಬೆಳ್ತಂಗಡಿ : ಬೆಳಾಲು ಗ್ರಾಮದ ಮಾಯ ನೆಕ್ಕಿಲಾಡಿ ನಿವಾಸಿ ಕೊರಗಪ್ಪ (48) ಮನೆಯ ಬಾತ್ ರೂಂ ನಲ್ಲಿ ಏ.10 ರಂದು ರಾತ್ರಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯಲ್ಲಿ ಪತ್ನಿ ಮಕ್ಕಳು ಕಾರ್ಯಕ್ರಮ ಹೋಗಿದ್ದ ವೇಳೆ ಘಟನೆ ನಡೆದಿದೆ. ಏ.11 ರಂದು ಬೆಳಗ್ಗೆ ಮಕ್ಕಳು ಬಂದು ನೋಡಿದಾಗ ಬೆಳಕಿಗೆ ಬಂದಿದೆ. ಧರ್ಮಸ್ಥಳ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.