29.9 C
ಪುತ್ತೂರು, ಬೆಳ್ತಂಗಡಿ
April 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ಕಡದ ಶ್ರೀರಾಮ ಸೇವಾ ಮಂದಿರದಲ್ಲಿ ಮಕ್ಕಳ ಬೇಸಿಗೆ ಶಿಬಿರ

ಕೊಕ್ಕಡ: ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ, ಶ್ರೀರಾಮ ಸೇವಾ ಟ್ರಸ್ಟ್ ಕೊಕ್ಕಡ, ಶ್ರೀರಾಮ ವಿದ್ಯಾಸಂಸ್ಥೆ ಪಟ್ಟೂರು ಇವರ ಸಹಯೋಗದಲ್ಲಿ 5ನೇ ತರಗತಿಯಿಂದ 9ನೇ ತರಗತಿಯ ಮಕ್ಕಳ ಬೇಸಿಗೆ ಶಿಬಿರವು ಕೊಕ್ಕಡದ ಶ್ರೀರಾಮ ಸೇವಾ ಮಂದಿರದಲ್ಲಿ ಎ.10 ರಂದು ಆರಂಭಗೊಂಡಿದ್ದು ಉಜಿರೆಯ ಗಣೇಶ್ ಪ್ರಸಾದ್ ಮೋಟರ್ ಡ್ರೈವಿಂಗ್ ಸ್ಕೂಲ್ ನ ಮಾಲಕ ರಾಮದಾಸ್ ಭಂಡಾರ್ಕರ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೃಷ್ಣ ಭಟ್ ಹಿತ್ತಿಲು ವಹಿಸಿದ್ದರು.

ಮುಖ್ಯ ಅತಿಥಿಯಾಗಿ ನಿವೃತ್ತ ಶಿಕ್ಷಕಿ ಮನೋರಮ, ಶ್ರೀರಾಮ ಸೇವಾ ಟ್ರಸ್ಟ್ ಕೊಕ್ಕಡ ಇದರ ಅಧ್ಯಕ್ಷ ಬಾಲಕೃಷ್ಣ ನೈಮಿಷ, ಶ್ರೀರಾಮ ಸೇವಾ ಟ್ರಸ್ಟ್ ನ ಕೋಶಾಧಿಕಾರಿ ಫಣಿರಾಜ್ ಜೈನ್ ಉಪಸ್ಥಿತರಿದ್ದರು.

ಚಂದ್ರಶೇಖರ ಪುತ್ತೂರು ರವರು ಪ್ರಾಚೀನ ಹಾಗೂ ಸಾಂಸ್ಕೃತಿಯ ಭಾರತ ಭೂಪಟ ಪರಿಚಯ, ರೇಣುಕಾ ಸುಧೀರ್ ರವರು ಕಥಾ ಅವಧಿ, ಪ್ರೊ. ಮಧೂರು ಮೋಹನ ಕಲ್ಲೂರಾಯರು ಗಮಕ ಪರಿಚಯ ಮತ್ತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ವಿದ್ಯಾರ್ಥಿಗಳ ಸರಸ್ವತಿ ವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಭವ್ಯ ಪಿ. ಡಿ. ಸ್ವಾಗತಿಸಿದರು. ಮೇಘಶ್ರೀ ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಶಿಕ್ಷಕರು ಸಹಕರಿಸಿದರು. ವಿಂದ್ಯಾ ಪಿ.ಎಸ್ ವಂದಿಸಿದರು.

ಶಿಬಿರವು ಏ. 14ರವರೆಗೆ ನಡೆಯಲಿದ್ದು, ಇಂದು (ಎ.11) 2 ನೇ ದಿನದ ಶಿಬಿರವನ್ನು ನಿವೃತ್ತ ಶಿಕ್ಷಕ ಕುಂಞಪ್ಪ ಗೌಡ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೃಷ್ಣ ಭಟ್ ಹಿತ್ತಿಲು, ಸದಸ್ಯ ಶಾಂತಪ್ಪ ಮಡಿವಾಳ ಉಪಸ್ಥಿತರಿದ್ದರು.

Related posts

ಕಲ್ಲೇರಿಯಲ್ಲಿ ರಕ್ತದಾನ ಶಿಬಿರ ಮತ್ತು ಉಚಿತ ನೇತ್ರ ತಪಾಸಣಾ ಶಿಬಿರ

Suddi Udaya

ನೆರಿಯ ವಲಯದ ಭಜನಾ ಪರಿಷತ್ ಸಭೆ

Suddi Udaya

ಮಲವಂತಿಗೆ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ ಪದಾಧಿಕಾರಿಗಳ ಆಯ್ಕೆ

Suddi Udaya

ಕಸ್ತೂರಿ ರಂಗನ್ ವರದಿ ವಿರುದ್ಧದ ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆ

Suddi Udaya

ವೇಣೂರು ಶ್ರೀ ಧ. ಮಂ. ಐಟಿಐಯ ತರಬೇತಿ ಉದ್ಘಾಟನೆ

Suddi Udaya

ಎಕ್ಸೆಲ್ ನ ವಿದ್ಯಾರ್ಥಿಗಳು ಬನಾರಸ್ ಹಿಂದೂ ವಿ.ವಿ, ಎ ಐ ಐ ಎಂ ಎಸ್ ಭೋಪಾಲ್ ಸೇರಿ, ದೇಶದ ಅತ್ಯುನ್ನತ ಮೆಡಿಕಲ್ ಕಾಲೇಜುಗಳಲ್ಲಿ ಓದಿಗೆ ಆಯ್ಕೆ

Suddi Udaya
error: Content is protected !!