April 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಗುರುವಾಯನಕೆರೆ: ಎನ್.ಇ.ಟಿ ನರ್ಸಿಂಗ್ ಕಾಲೇಜಿನ ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿಗಳ ಲ್ಯಾಂಪ್ ಲೈಟಿಂಗ್ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭ

ಗುರುವಾಯನಕೆರೆ: ಇಲ್ಲಿಯ ಎನ್.ಇ.ಟಿ ನರ್ಸಿಂಗ್ ಕಾಲೇಜು (ನೀತಿ ಶಿಕ್ಷಣ ಟ್ರಸ್ಟ್‌ನ ಘಟಕ) ಮೊದಲ ಬ್ಯಾಚ್ ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿಗಳ ಲ್ಯಾಂಪ್ ಲೈಟಿಂಗ್ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭವು ಎ.11ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾದ ಉಜಿರೆ ಎಸ್.ಡಿ.ಎಂ ಹಾಸ್ಪಿಟಲ್ ನ ವ್ಯವಸ್ಥಾಪಕ ನಿರ್ದೇಶಕ ಎಂ ಜನಾರ್ಧನ್ ರವರು ದೀಪ ಪ್ರಜ್ವಲಿಸಿ ಮಾತನಾಡಿದರು. ಉಜಿರೆ ಎಸ್.ಡಿ.ಎಂ ಹಾಸ್ಪಿಟಲ್ ನ ನರ್ಸಿಂಗ್ ಸೂಪರಿಂಡೆಂಟ್ ಶೆರ್ಲಿ ರವರು ಲ್ಯಾಂಪ್ ಲೈಟಿಂಗ್ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.

ವೇದಿಕೆಯಲ್ಲಿ ನೀತಿ ಶಿಕ್ಷಣ ಟ್ರಸ್ಟ್‌ ಅಧ್ಯಕ್ಷ ಸಾಜಿ ಪಿ.ಆರ್, ಮ್ಯಾನೇಜಿ0ಗ್ ಟ್ರಸ್ಟಿ ನಿತೀಶ್ ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರೊ. ಮನು ಕೆ.ಜೆ ಜೋಸೆಫ್ ಪ್ರಮಾಣ ವಚನ ಕಾರ್ಯಕ್ರಮವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಉಪನ್ಯಾಸಕ ಡಾ. ಪ್ರವೀಣ್ ಕುಮಾರ್, ಸೌಮ್ಯ ಹೆಚ್.ಆರ್, ಡಾ. ಶ್ರೀಹರಿ, ಡಾ. ವಿದ್ಯಾ ಗೌರಿ, ಸೋಜು ಅಗಸ್ಟೀನ್ ಹಾಗೂ ವಿದ್ಯಾರ್ಥಿಗಳು, ಪೋಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪಿ.ಆರ್.ಒ ಶ್ರೀಮತಿ ಮಧುರಾ ಸ್ವಾಗತಿಸಿದರು.ಉಪನ್ಯಾಸಕರಾದ ಮೇರ್ಲಿ ನಿರೂಪಿಸಿ, ಪೂಜಾ ರವರು ಅತಿಥಿಯಾದ ಶೆರ್ಲಿ ರವರ ಪರಿಚಯವನ್ನು ಬೋಧಿಸಿ, ವಂದಿಸಿದರು.

Related posts

ಮೇಲಂತಬೆಟ್ಟು ಶ್ರೀ ಬ್ರಹ್ಮ ಬೈದರ್ಕಳ ಧರ್ಮಚಾವಡಿ ಪಾಲೆತ್ತಡಿ ಗುತ್ತು ಜೀರ್ಣೋದ್ದಾರದ ಸಮಾಲೋಚನ ಸಭೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಯಲ್ಲಿ ‘ಫೈರ್ ಸೇಫ್ಟಿ ಅಭಿಯಾನ್’ ಕಾರ್ಯಾಗಾರ

Suddi Udaya

ಗಣೇಶೋತ್ಸವದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ನಗದು ಬಹುಮಾನದಲ್ಲಿ ಬಳಂಜ ಶಾಲೆಯ ಶಾಲಾ ಸಭಾಂಗಣದ ಶಾರದಾ ಕಲಾಮಂದಿರಕ್ಕೆ ಎರಡು ಫೋಕಸ್ ಲೈಟುಗಳ ಕೊಡುಗೆ ನೀಡಿದ ವಿದ್ಯಾರ್ಥಿಗಳು

Suddi Udaya

ಬೆಳ್ತಂಗಡಿ: ದ.ಕ. ಜಿಲ್ಲಾ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ಮಹಾಸಭೆ

Suddi Udaya

ರಾಜ್ಯ ಪುರಸ್ಕಾರ ಪರೀಕ್ಷೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿಗಳು ತೇರ್ಗಡೆ

Suddi Udaya

ಗೇರುಕಟ್ಟೆ ಹಿರಿಯರಾದ ಹಾಮದ್ ಕುಂಇೆ ನಿಧನ

Suddi Udaya
error: Content is protected !!