ಅರಸಿನಮಕ್ಕಿ: ನವ ಭಾರತ’ ಸಂಘಟನೆಯ ಆಶ್ರಯದಲ್ಲಿ ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅನುದಾನಿತ ಹಿ. ಪ್ರಾ. ಶಾಲೆಯಲ್ಲಿ 5ರಿಂದ 9ನೇ ತರಗತಿ ಮಕ್ಕಳಿಗೆ ಮಕ್ಕಳ ಸಂಸ್ಕಾರ ಶಿಬಿರದ ಉದ್ಘಾಟನೆಯು ಎ.10ರಂದು ನಡೆಯಿತು.

ಕಾರ್ಯಕ್ರಮವನ್ನು ಅರಿಕೆಗುಡ್ಡೆ ಶ್ರೀ ವನದುರ್ಗ ದೇವಸ್ಥಾನದ ಅರ್ಚಕ ಉಲ್ಲಾಸ್ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಗಾಯತ್ರಿ, ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ. ಎಸ್., ಕಾಪು ಉಪ್ಪರಡ್ಕ ದೈವಸ್ಥಾನಗಳ ಸಮಿತಿ ಅಧ್ಯಕ್ಷ ಧರ್ನಪ್ಪ ಗೌಡ, ನಿಡ್ಲೆ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಶರತ್ ತುಳಪುಳೆ, ನೇಲ್ಯಡ್ಕ ಶಾಲಾ ಮುಖ್ಯ ಶಿಕ್ಷಕ ಅರವಿಂದ ಗೋಖಲೆ, ಉದ್ಯಮಿ ಶ್ರೀರಂಗ ದಾಮ್ಲೆ ಉಪಸ್ಥಿತರಿದ್ದು, ಶುಭ ಹಾರೈಸಿದರು.

ಗಣೇಶ್ ಹೊಸ್ತೋಟ ಸ್ವಾಗತಿಸಿ, ವೃಶಾಂಕ್ ಖಾಡಿಲ್ಕರ್ ಕಾರ್ಯಕ್ರಮ ನಿರೂಪಿಸಿದರು.
ಶಿಬಿರವು ಎ.10ರಿಂದ ಎ. 13 ರವರೆಗೆ ಬೆಳಗ್ಗೆ 9.00ರಿಂದ ಸಂಜೆ 5.00ರ ವರೆಗೆ ನಡೆಯಲಿದ್ದು, ಸಂಪೂರ್ಣ ಉಚಿತವಾಗಿದ್ದು ಯೋಗ, ಭಜನೆ. ಭಗವದ್ಗೀತೆ, ಪೌರಾಣಿಕ, ಐತಿಹಾಸಿಕ ಕಥೆಗಳು, ಪೇಪರ್ ಕ್ರಾಫ್ಟ್, ದೇಶಿಯ ಆಟಗಳು, ಗಿಡಮೂಲಿಕೆಗಳ ಪರಿಚಯ, ಉರಗ ತಜ್ಞರಿಂದ ಮಾಹಿತಿ, ಕಿರು ಅಧ್ಯಯನ ಪ್ರವಾಸ, ಆರೋಗ್ಯ ಸಲಹೆ ಮುಂತಾದ ಮಾಹಿತಿ ತರಬೇತಿಯನ್ನು ನೀಡಲಾಗುತ್ತದೆ.