
ಹತ್ಯಡ್ಕ: ಅಖಿಲ ಕರ್ನಾಟಕ ರಾಣಿಯಾರ್ ಸಮಾಜ ಸೇವಾ ಸಂಘ ವಲಯ ಶಾಖೆ ತುಂಬೆತಡ್ಕ ಇದರ ವತಿಯಿಂದ ಎ.10 ರಂದು “ಸ್ವಚ್ಛ ಭಾರತ ಅಭಿಯಾನ “ಕಾರ್ಯಕ್ರಮದ ಪ್ರಯುಕ್ತ “ರಾಣಿಯಾರ್ “ಜಾತಿ ಭಾಂದವರು ಮುದ್ದಿಗೆಯಿಂದ ಕಾಂತ್ರೆಲ್ ಹಾಗೂ ಮುದ್ದಿಗೆಯಿಂದ ಒಳಂಬಳದ ವರೆಗೆ ರಸ್ತೆ ಪಕ್ಕ ಪ್ಲಾಸ್ಟಿಕ್, ಕಸ, ತ್ಯಾಜ ಹೆಕ್ಕುವ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮಕ್ಕೆ ರಾಣಿಯಾರ್ ವಲಯ ಶಾಖೆ ಅಧ್ಯಕ್ಷ ಮಹಾಬಲ ಕೆ, ಕಾರ್ಯದರ್ಶಿ ಉಮೇಶ, ಉಪಾಧ್ಯಕ್ಷ ಸುಜಾತ , ಉಪಾಧ್ಯಕ್ಷರು ಪ್ರೇಮಚಂದ್ರ ಯಸ್, ಕೋಶಾಧಿಕಾರಿ ಶ್ರೀಧರ ಕೆ, ಕಾರ್ಯಕಾರಿ ಸಮಿತಿ ಸದಸ್ಯರು ಮೋಹನ ಟಿ ಕೆ, ಉಮೇಶ ಹೆಚ್, ನಾಗೇಶ, ರವಿ ಯಸ್, ರವೀಂದ್ರ ಕೆ, ಶೈಲಾ, ಪದ್ಮಾವತಿ ಹಾಗೂ ರಾಣಿಯಾರ್ ಜಾತಿ ಭಾಂದವರು ಪಾಲ್ಗೊಂಡರು.