29.2 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ನೆರಿಯ: ಬಾಂಜಾರು ಶ್ರೀ ಮಹಾಗಣಪತಿ ದೇವಸ್ಥಾನದ ಗರ್ಭಗುಡಿಯ ಶಿಲಾನ್ಯಾಸ

ನೆರಿಯ: ಕಾರಣೀಕ ಹಾಗೂ ಅತ್ಯಂತ ಪ್ರಸಿದ್ದಿ ಬಾಂಜಾರು ಶ್ರೀ ಮಹಾಗಣಪತಿ ದೇವಸ್ಥಾನದ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮವು ಅಲಂಬಾಡಿ ಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಎ. 11 ರಂದು ನಡೆಯಿತು.

ಶಿಲಾನ್ಯಾಸವನ್ನು ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರು, ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕರಾದ ಕೆ. ಮೋಹನ್ ಕುಮಾರ್ ನೆರವೇರಿಸಿ ಗ್ರಾಮೀಣ ಪ್ರದೇಶದಲ್ಲಿ, ಪ್ರಶಾಂತವಾದ ವಾತಾವರಣದಲ್ಲಿರುವ ಇಂತಹ
ಶ್ರದ್ದಾ ಕೇಂದ್ರಗಳ ರಕ್ಷಣೆ ಮತ್ತು ಅಭಿವೃದ್ಧಿಯನ್ನು ನಾವುಗಳು ಮಾಡಿದಾಗ ಅದರ ಫಲ ಖಂಡಿತಾ ನಮಗೆ ಸಿಗುತ್ತದೆ. ನಾವೆಲ್ಲರೂ ಪ್ರಕೃತಿ ಆರಾಧಕರೂ. ಪ್ರಕೃತಿಯಲ್ಲಿ ದೇವರನ್ನು ಕಂಡವರು ಎಂದರು‌.

ಅಧ್ಯಕ್ಷತೆಯನ್ನು ಶ್ರೀ ಬಾಂಜಾರು ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಪಿ. ಕೃಷ್ಣಪ್ಪ ವಹಿಸಿ ಎಲ್ಲರ ಸಹಕಾರ ಕೋರಿದರು.

ಮುಖ್ಯ ಅತಿಥಿಗಳಾಗಿ ಬೆಂಗಳೂರು ಹೈಕೋರ್ಟ್ ನ್ಯಾಯವಾದಿ ವೆಂಕಟೇಶ್, ಮುಂಡಾಜೆ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ್‌ ನಾರಾಯಣ ರಾವ್, ಬೆಳ್ತಂಗಡಿ ಮಲೆಕುಡಿಯರ ಸಂಘ ಅಧ್ಯಕ್ಷ ಶಿವರಾಂ ಎ, ಕೊರಗಪ್ಪ ಗೌಡ ಅರಣೆಪಾದೆ-ಚಾರ್ಮಾಡಿ ಉಪಸ್ಥಿತರಿದ್ದರು. ಸಮಿತಿ ಸದಸ್ಯರು ಸಹಕರಿಸಿದರು.

Related posts

ಧರ್ಮಸ್ಥಳ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವ: ತೋರಣಮುಹೂರ್ತ, ಕ್ಷೇತ್ರಪಾಲ ಪ್ರತಿಷ್ಠೆ

Suddi Udaya

ಗುರುವಾಯನಕೆರೆ: ಸೆಲೆಕ್ಷನ್ ವೇರ್ ನಲ್ಲಿ ಮಾನ್ಸೂನ್ ಸ್ಪೆಷಲ್ ಆಫರ್: ಪ್ರತಿ ಖರೀದಿಯ ಮೇಲೆ ಶೇ.50 ರಷ್ಟು ರಿಯಾಯಿತಿ

Suddi Udaya

ಮಾಲಾಡಿ ಸರ್ಕಾರಿ ಐಟಿಐ ಯಲ್ಲಿ ಕ್ಯಾಂಪಸ್ ಸಂದರ್ಶನ

Suddi Udaya

ರೋಟರಿ ಕ್ಲಬ್ ಸುಬ್ರಮಣ್ಯ ಮತ್ತು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಮಣ್ಯ ವತಿಯಿಂದ ಐದು ಹಿರಿಯ ನಿವೃತ್ತ ಶಿಕ್ಷಕರಿಗೆ ಸನ್ಮಾನ

Suddi Udaya

ತಾಳೆ ಬೆಳೆ ಪ್ರದೇಶ ವಿಸ್ತರಣೆ: ಅರ್ಜಿ ಆಹ್ವಾನ

Suddi Udaya

ಧರ್ಮಸ್ಥಳದಲ್ಲಿ ಕನ್ನಡ ಭುವನೇಶ್ವರಿ ರಥ

Suddi Udaya
error: Content is protected !!