ಧರ್ಮಸ್ಥಳ : ಇಲ್ಲಿಯ ಮುಳಿಕ್ಕಾರು ಬೈಲಿನ ಶ್ರೀ ವ್ಯಾಘ್ರ ಚಾಮುಂಡಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಸಂಭ್ರಮದಿಂದ ಸಂಪನ್ನಗೊಂಡಿತ್ತು.

ಎ.10 ರಂದು ಬೆಳಿಗ್ಗೆ ಮುಳಿಕ್ಕಾರು ನಿಡ್ಲೆ ಮಧ್ಯೆ ಮಾಡಾಂಗಳ್ ಎಂಬಲ್ಲಿ ಹರಿಯುತ್ತಿರುವ ಸಂಪಿಗೆ ನದಿ ಮದ್ಯದಲ್ಲಿರುವ ಬೆರ್ಮೆರ್ ( ನಾಗ ಬ್ರಹ್ಮ) ಸಾನಿಧ್ಯ ದಲ್ಲಿ ನಾಗ ಬ್ರಹ್ಮದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ನಂತರ ಕಲ್ಲಾಜೆ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಪಿಗೆ ನದಿ ತಟದಲ್ಲಿ ವನ ಭೋಜನ ನಡೆಯಿತು. ರಾತ್ರಿ 9 ಗಂಟೆಗೆ ಕಲ್ಲಾಜೆ ಶ್ರೀ ಪಿಲಿ ಚಾಮುಂಡಿ ದೈವಸ್ಥಾನದಿಂದ ದೈವಗಳ ವೈಭವದ ಭಂಡಾರ ಹೊರಟು ಕಾಡಿನ ಮದ್ಯೆ ಇರುವ ನೆಲ್ಲಿಕಟ್ಟೆ ಎಂಬಲ್ಲಿ ನೇಮೋತ್ಸವ ಜರಗಿತು.

ಈ ಸಂದರ್ಭದಲ್ಲಿ ಗ್ರಾಮದ ಗುತ್ತಿನರಾರಾರು ಸೇರಿದಂತೆ ದೈವಸ್ಥಾನ ಸಮಿತಿ ಸರ್ವ ಸದಸ್ಯರು, ಊರ ಪ್ರಮುಖರು, ಹಾಗೂ ಊರ, ಪರವೂರ ಭಕ್ತ ಭಾಂದವರು ಉಪಸ್ಥಿತರಿದ್ದರು.