ಕೊಕ್ಕಡ: ಭಾರತೀಯ ಜೀವವಿಮಾ ನಿಗಮದ ನಿವೃತ್ತ ಆಡಳಿತ ನಿರ್ದೇಶಕ ಸುಶೀಲ್ ಕುಮಾರ್ ಸಪತ್ನಿಕರಾಗಿ ಇಂದು(ಎ.11) ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಮಾಡಿದರು.

ದೇವಸ್ಥಾನದ ಪರವಾಗಿ ಅರ್ಚಕ ಸುಬ್ರಮಣ್ಯ ಹಾಗೂ ಮ್ಯಾನೇಜರ್ ರಾಮಕೃಷ್ಣ ಶ್ರೀಯುತರಿಗೆ ಗೌರವ ಸಲ್ಲಿಸಿದರು.
ಯಲ್ ಐ ಸಿ ಬೆಳ್ತಂಗಡಿ ಸಂಪರ್ಕ ಶಾಖೆ ಮ್ಯಾನೇಜರ್ ವಿ ಯಸ್ ಕುಮಾರ್, ಉಡುಪಿ ವಿಭಾಗದ ಪ್ರಾಡಕ್ಟ್ ಮ್ಯಾನೇಜರ್ ದುರ್ಗಾರಾಮ ಶೆಣೈ, ಡೆವಲಪ್ಮೆಂಟ್ ಆಫೀಸರ್ ಉದಯಶಂಕರ್ ಉಪಸ್ಥಿತರಿದ್ದರು.