ಬೆಳ್ತಂಗಡಿ : ಅಂಗಡಿ ಪಕ್ಕದಲ್ಲಿ ನಿಲ್ಲಿಸಿದ್ದ ಸುಮಾರು ರೂ. 6.50 ಲಕ್ಷ ಮೌಲ್ಯದ ಕಾರನ್ನು ಯಾರೋ ಕಳ್ಳರು ಕಳವುಗೈದ ಘಟನೆ ಉಜಿರೆಯಲ್ಲಿ ನಡೆದಿದೆ.
ಉಜಿರೆ ಗ್ರಾಮದ ಕಾಲೇಜು ರಸ್ತೆ ಬಳಿಯ ನಿವಾಸಿ ಅಬ್ದುಲ್ ಮುತ್ತಲೀಬ್ ಎಂಬವರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಾಗಿದೆ.
ಕಳೆದ ಮಾ. 29 ರಂದು ಬೆಳಿಗ್ಗೆ ಮುತ್ತಲೀಬ್ ಅವರು ತಮ್ಮ KA-70-M-5850 ಆಲ್ಟೋ ಕೆ -10 ಕಾರನ್ನು ಉಜಿರೆ ಗ್ರಾಮದ ಉಜಿರೆ ಕಾಲೇಜು ರಸ್ತೆ ಪಾರ್ಕಿಂಗ್ ಇರುವ ಅವರ ಅಂಗಡಿ ಪಕ್ಕದಲ್ಲಿ ನಿಲ್ಲಿಸಿ, ಅಂಗಡಿಯಲ್ಲಿ ವ್ಯಾಪಾರ ಮುಗಿಸಿ ರಾತ್ರಿ 10 ಗಂಟೆಗೆ ಮನೆಗೆ ಹೋಗಲು ಹೋದಾಗ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಕಾರು ಕಂಡು ಬರಲಿಲ್ಲ ನಂತರ ಕಾರಿನ ಪತ್ತೆಯ ಬಗ್ಗೆ ತನ್ನ ಸ್ನೇಹಿತರಲ್ಲಿ ಹಾಗೂ ಇತರರಲ್ಲಿ ವಿಚಾರಿಸಿದ್ದು ಕಾರು ಪತ್ತೆ ಯಾಗಿರುವುದಿಲ್ಲ ಕಳವು ಮಾಡಿಕೊಂಡು ಹೋದ ಕಾರಿನ ಅಂದಾಜು ಮೌಲ್ಯ 6.50.000/-(ಆರು ಲಕ್ಷದ ಐವತ್ತು ಸಾವಿರ) ಆಗಬಹುದು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆ ಅಕ್ರ ನಂ : 20/2025 ಕಲಂ 303(1) BNS-2023 ಯಂತೆ ಪ್ರಕರಣ ದಾಖಲಾಗಿರುತ್ತದೆ.