ಶಿಶಿಲ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ಗ್ರಾಮ ಸಮಿತಿ ಶಿಶಿಲ ಇದರ ವಾರ್ಷಿಕ ಕಾರ್ಯಕ್ರಮವು ಅಡ್ಡ ಹಳ್ಳ ಪುರುಷೋತ್ತಮ ಗೌಡರ ಮನೆಯಲ್ಲಿ ಎ. 12ರಂದು ನಡೆಯಿತು.

ಸಭಾ ಕಾರ್ಯಕ್ರಮವನ್ನು ಕಾರ್ಯಕ್ರಮವನ್ನು ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷರಾದ ಕುಶಾಲಪ್ಪ ಗೌಡ ಹಾಗೂ ಗ್ರಾಮ ಗೌಡರಾದ ಸೇಸಪ್ಪ ಗೌಡ ಸತ್ತಿಕಲ್ಲು ದೀಪ ಬೆಳಗಿಸಿ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಶಿಶಿಲ ಗ್ರಾಮ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಜಿ. ಬದ್ರಿಜಾಲು ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಉದ್ಯಮಿಗಳಾದ ಕಿರಣ್ ಚಂದ್ರ ಪುಷ್ಪಗಿರಿ, ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಯುವ ವೇದಿಕೆಯ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಸ್ಪಂದನ ಒಕ್ಕಲಿಗ ಸೇವಾ ಸಮಿತಿಯ ಸುರೇಶ್ ಕೌಡಂಗೆ, ಸೀತಾರಾಮ್ ಬೆಳಾಲು, ಶಿಶಿಲ ಒಕ್ಕಲಿಗ ಮಹಿಳಾ ಸಮಿತಿಯಅಧ್ಯಕ್ಷೆ ಉಮಾವತಿ ಗಣೇಶ್ ಗೌಡ ಕೆಳಗಿನ ಒಟ್ಲ ಉಪಸ್ಥಿತರಿದ್ದರು.

ಆರ್ಥಿಕ ಸಂಕಷ್ಟದಲ್ಲಿದ್ದು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಶಿಬಾಜೆ ಪೆರ್ಲ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷರಾದ ತಿಮ್ಮಪ್ಪ ಗೌಡ ಇವರಿಗೆ ಮತ್ತು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಶಿಶಿಲ ಗ್ರಾಮದ ಕಂಡೆಚ್ಚಾರ್ ದಿ. ಚೆನ್ನಪ್ಪ ಗೌಡರ ಪತ್ನಿ ಶ್ರೀಮತಿ ಪೂರ್ಣಿಮಾ ಇವರಿಗೆ ಚಿಕಿತ್ಸಾ ಸಹಾಯಾರ್ಥ ಧನಸಹಾಯ. ನೀಡಲಾಯಿತು. 50 ವರ್ಷಗಳಿಂದ ಗ್ರಾಮದ ಗೌಡರಾಗಿ ಉತ್ತಮ ಸೇವೆ ಸಲ್ಲಿಸಿದ ಸೇಸಪ್ಪ ಗೌಡ ಸತ್ತಿಕಲ್ಲು, ವಿವಿಧ ಇಲಾಖೆ ಹಾಗೂ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಶಿಶಿಲ ಗ್ರಾಮದವರನ್ನು, ಕಳೆದ ಎಸ್. ಎಸ್. ಎಲ್. ಸಿ ಮತ್ತು ಪಿ. ಯು. ಸಿಯಲ್ಲಿ ಉತ್ತಮ ಅಂಕ ಪಡೆದ ಶಿಶಿಲ ಗ್ರಾಮದ ವಿದ್ಯಾರ್ಥಿಗಳನ್ನು, ವಾರ್ಷಿಕ ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು, ಕಾರ್ಯಕ್ರಮ ಕ್ಕೆ ಸ್ಥಳಾವಕಾಶ ನೀಡಿದ ಅಡ್ಡಹಳ್ಳ ಪುರುಷೋತ್ತಮ ದಂಪತಿಗಳನ್ನು ಗೌರವಿಸಲಾಯಿತು. ವಯಸ್ಸಿನ ಕಾರಣದಿಂದ ಗ್ರಾಮದ ಗೌಡ ಸ್ಥಾನ ವನ್ನು ಸೇಸಪ್ಪ ಗೌಡ ಸತ್ತಿಕಲ್ಲು ರವರು ರಮೇಶ್ ಗೌಡ ಪಿಲಿಂಗಲ್ ರವರಿಗೆ ಹಸ್ತಾಂತರಿಸಿದರು. ಹಾಗೆಯೇ ಒತ್ತು ಗೌಡ ಸ್ಥಾನವನ್ನು ಬಾಬು ಗೌಡ ದೇವಸ ಹಾಗೂ ಕೃಷ್ಣಪ್ಪ ಗೌಡ ಮುಚ್ಚಿರಡ್ಕರವರಿಗೆ ಹಸ್ತಾಂತರಿಸಲಾಯಿತು. 7 ಕುಟುಂಬ ಸ್ಥರನ್ನು ಸಂಘಕ್ಕೆ ಸೇರಿಸಲಾಗಿದ್ದು ಪ್ರಮಾಣ ಪತ್ರ ನೀಡಲಾಯಿತು.
ಲಾವಣ್ಯ ಪ್ರಾರ್ಥಿಸಿದರು.ಗ್ರಾಮ ಸಮಿತಿ ಅಧ್ಯಕ್ಷರಾದ ಕುಶಾಲಪ್ಪ ಗೌಡ ಬದ್ರಿಜಾಲು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಭುವನ್ ಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿದರು. ಜೊತೆ ಕಾರ್ಯದರ್ಶಿ ಸುಬ್ರಾಯ ಗೌಡ ಧನ್ಯವಾದವಿತ್ತರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಕೊರಗಪ್ಪ ಗೌಡ ಪಡ್ಪು, ಯುವ ವೇದಿಕೆಯ ಅಧ್ಯಕ್ಷ ಪ್ರಮೀತ್ ಗೌಡ ಮಂತಾಜೆ, ಕಾರ್ಯದರ್ಶಿ ರಾಕೇಶ್ ಗೌಡ ಪಡ್ಪು, ಮಹಿಳಾ ಸಮಿತಿ ಕಾರ್ಯದರ್ಶಿ ಕೋಮಲಾಕ್ಷಿ ಅಡ್ಡಹಳ್ಳ, ಗ್ರಾಮ ಒತ್ತು ಗೌಡರಾದ ಬಾಬು ಗೌಡ ದೇವಸ ಮತ್ತು ಕೃಷ್ಣಪ್ಪ ಗೌಡ ಮುಚ್ಚಿರಡ್ಕ, ಬೈಲುವಾರು ಸಮಿತಿಯ ಮುಖ್ಯಸ್ಥರು ಹಾಗೂ ಗ್ರಾಮ ಸಮಿತಿ, ಮಹಿಳಾ ಸಮಿತಿ, ಯುವ ವೇದಿಕೆಯ ಸರ್ವ ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ವಾರ್ಷಿಕ ಕಾರ್ಯಕ್ರಮದ ಪ್ರಯುಕ್ತ ಶ್ರೀ ಸತ್ಯನಾರಾಯಣ ದೇವರ ಪೂಜಾ ಕಾರ್ಯಕ್ರಮ ಜರುಗಿತು.