23.3 C
ಪುತ್ತೂರು, ಬೆಳ್ತಂಗಡಿ
April 13, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಿಡಿಗಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವರ ವರ್ಷಾವಧಿ ಜಾತ್ರೆ-ನಡ್ವಾಲ್ ಸಿರಿಜಾತ್ರೆ: ಆಶ್ಲೇಷಾ ಬಲಿ-ಶ್ರೀ ನಾಗದರ್ಶನ ಸೇವೆ, ಶ್ರೀ ನಾಗದೇವರ ಮತ್ತು ಶ್ರೀ ಲೋಕನಾಥೇಶ್ವರ ದೇವರ ಭೇಟಿ,

ಬೆಳ್ತಂಗಡಿ: ತುಳುನಾಡಿನ ಸತ್ಯನಾಪುರದ ‘ಸತ್ಯದ ಸಿರಿಗಳ’ ಮೂಲ ಆಲಡೆಯ ಪುಣ್ಯಕ್ಷೇತ್ರ ಲೋಕನಾಡು ಶ್ರೀ ಲೋಕನಾಥೇಶ್ವರ ದೇವರ ವರ್ಷಾವಧಿ ಜಾತ್ರೆ-ನಡ್ವಾಲ್ ಸಿರಿಜಾತ್ರಾ ಮಹೋತ್ಸವ-ಶ್ರೀ ನಾಗದರ್ಶನ, ಆಶ್ಲೇಷಾ ಬಲಿ, ದೈವಗಳ ನೇಮೋತ್ಸವವು ಎ.10 ರಿಂದ ಪ್ರಾರಂಭಗೊಂಡು ಎ.14 ರವರೆಗೆ ವಿವಿಧ ಧಾರ್ಮಿಕ ವೈದಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ.

ಇಂದು (ಎ.12) ಬೆಳಿಗ್ಗೆ ಗಣಹೋಮ, ರುದ್ರಾಭಿಷೇಕ, ಮಹಾಪೂಜೆ, ಶ್ರೀ ನಾಗಬ್ರಹ್ಮರ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಪುಣ್ಯಾಹ, ಸ್ಥಳ ಶುದ್ಧಿ, ಕಲಾತತ್ವ ಹೋಮ, ಸರ್ವಪ್ರಾಯಶ್ಚಿತ್ತ, ವೇದಮೂರ್ತಿ ನಾಗಪಾತ್ರಿ ಶ್ರೀ ಸುಬ್ರಹ್ಮಣ್ಯ ಮಧ್ಯಸ್ಥ ಇವರ ನೇತೃತ್ವದಲ್ಲಿ ಆಶ್ಲೇಷಾ ಬಲಿ-ಶ್ರೀ ನಾಗದರ್ಶನ ಸೇವೆ, ಮಧ್ಯಾಹ್ನ ಶ್ರೀ ದೇವರ ಉತ್ಸವ, ಶ್ರೀ ನಾಗದೇವರ ಮತ್ತು ಶ್ರೀ ಲೋಕನಾಥೇಶ್ವರ ದೇವರ ಭೇಟಿ, ಮಹಾಪೂಜೆ ಪಲ್ಲಪೂಜೆ, ನಡೆಯಿತು.

ಈ ಸಂದರ್ಭದಲ್ಲಿ ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಪಾಂಡುರಂಗ ಮರಾಠ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುರುರಾಜ್, ಜಾತ್ರೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸದಾನಂದ ಪೂಜಾರಿ, ಜಾತ್ರೋತ್ಸವ ಹಾಗೂ ವ್ಯವಸ್ಥಾಪನ ಸಮಿತಿಯ ಸದಸ್ಯರು, ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಸಂಜೆ ಕೊಲ್ಲಿ ಶ್ರೀ ದುರ್ಗಾದೇವಿ ಭಜನಾ ಮಂಡಳಿ ಮತ್ತು ಗುರಿಪಳ್ಳ ಶ್ರೀ ಗುರುರಾಘವೆಂದ್ರ ಭಜನಾ ಮಂಡಳಿಯಿಂದ ಭಜನೆ ‘ಭಾವ-ಗಾನ-ಕುಣಿತ’, ರಾತ್ರಿ ಧಾರ್ಮಿಕ ಸಭೆ ನಡೆಯಲಿದ್ದು ಸಭಾಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುರಾಜ್ ಗುರಿಪಳ್ಳ ವಹಿಸಲಿರುವರು.

ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್, ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ, ನಡ ಗ್ರಾ.ಪಂ. ಅಧ್ಯಕ್ಷೆ ಮಂಜುಳಾ, ಇಂಜಿನಿಯರ್ ರಾಕೇಶ್ ಬಂಗೇರ, ಧಾರ್ಮಿಕ ಪರಿಷತ್ ಸದಸ್ಯರಾದ ಯೋಗೀಶ್ ಕುಮಾರ್, ಮಲ್ಲಿಕಾ ಪಕ್ಕಳ ಇನ್ನಿತರರು ಭಾಗವಹಿಸುವರು. ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನವೀನ್ ಮರಿಕೆ ಧಾರ್ಮಿಕ ಉಪನ್ಯಾಸವನ್ನು ನೆರವೇರಿಸಲಿರುವರು. ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪಾಂಡುರಂಗ ಮರಾಟೆ, ನಡ ಗ್ರಾ.ಪಂ ಸದಸ್ಯರಾದ ದಿವಾಕರ, ವಿನುತಾ, ಮಮತಾ ಉಪಸ್ಥಿತರಿರುವರು. ರಾತ್ರಿ 7.30ರಿಂದ ಕುಮಾರ ದರ್ಶನ, ದೇವರ ಉತ್ಸವ, ಕಟ್ಟೆಪೂಜೆ “ವಾರ್ಷಿಕ ನಡ್ವಾಲ್ ಸಿರಿಜಾತ್ರೆ”, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಊರ-ಪರವೂರ ಕಲಾವಿದರಿಂದ ಸಾಂಸ್ಕೃತಿಕ ವೈಭವ, ಶ್ರೀ ಸಿದ್ಧಿವಿನಾಯಕ ಕಲಾತಂಡ ಗುರಿಪಳ್ಳ ಅಭಿನಯದ ಕುತೂಹಲಭರಿತ ತುಳು ಹಾಸ್ಯಮಯ ನಾಟಕ “ಕಥೆ ಏರ್ ಬರೆಪೆರ್…? ” ಜರುಗಲಿರುವುದು.

Related posts

ಅ.3-12 : ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ನವರಾತ್ರಿ ವಿಶೇಷ ಪೂಜೆ

Suddi Udaya

ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷರಾಗಿ ವಿಮಲ, ಉಪಾಧ್ಯಕ್ಷರಾಗಿ ಶ್ರೀನಿವಾಸ್ ರಾವ್ ಆಯ್ಕೆ

Suddi Udaya

ಕಾಜೂರು ಉರೂಸ್ ಗೆ ಅದ್ದೂರಿ ಚಾಲನೆ

Suddi Udaya

ಗುರುವಾಯನಕೆರೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಮಾತೃ ಪೂಜನ, ಮಾತೃ ವಂದನ ಮತ್ತು ಮಾತೃ ಭೋಜನ ವಿಶಿಷ್ಟ ಭಾವಪೂರ್ಣ ಕಾರ್ಯಕ್ರಮ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ರಂಜಿತ್ ಹೆಚ್.ಡಿ ಬಳಂಜ ವಲಯ ಉಪಾಧ್ಯಕ್ಷರಾಗಿ ಆಯ್ಕೆ

Suddi Udaya

ವೇಣೂರು: ತಾಲೂಕು ಧ್ವನಿವರ್ಧಕ-ದೀಪಾಲಂಕಾರ ಮಾಲಕರ ಸಂಘದ ಸಭೆ: ಆ. 22ರಂದು ಮಹಾಸಭೆ ನಡೆಸುವ ಬಗ್ಗೆ ಸಭೆಯಲ್ಲಿ ನಿರ್ಣಯ

Suddi Udaya
error: Content is protected !!