ನಾಲ್ಕೂರು: ನಾಲ್ಕೂರು ಗ್ರಾಮದ ಸೂಳಬೆಟ್ಟು ಸಾರ್ವಜನಿಕ ರಸ್ತೆಯ ಡೆಪ್ಪುಣಿ ಪ್ರಯಾಣಿಕರ ಬಸ್ ತಂಗುದಾನದ ಬಳಿಯಲ್ಲಿ ಯಾರೋ ಕಿಡಿಗೇಡಿಗಳು ವಾಮಾಚಾರ ಎಸಗಿರುವುದು ಎ.12 ರಂದು ಬೆಳಕಿಗೆ ಬಂದಿದೆ.
ಸೂಳಬೆಟ್ಟು ಡೆಪ್ಪುಣಿ ಬಸ್ ತಂಗುದಾನ ಬಳಿ ಪ್ರತಿನಿತ್ಯ ಹತ್ತು ಹಲವಾರು ವಾಹನನಗಳು, ಪಾದಚಾರಿಗಳು, ನಡೆದುಕೊಂಡು ಹೋಗುವ ಪ್ರಮುಖ ರಸ್ತೆಯಾಗಿದ್ದು ಬದಿಯಲ್ಲಿರುವ ಬಸ್ ತಂಗುದಾನದ ಬದಿಯಲ್ಲಿ ಈ ಕೃತ್ಯ ಎಸಗಿರುವುದು ಸುತ್ತಮುತ್ತಲಿನ ಮನೆಗಳಲ್ಲಿ, ಪಾದಚಾರಿಗಳಲ್ಲಿ, ಸಾರ್ವಜನಿಕರಲ್ಲಿ ಭಯದ ವಾತವಾರಣ ಸೃಷ್ಟಿಯಾಗಿದೆ. ವಿದ್ಯಾರ್ಥಿಗಳು, ಉದ್ಯೋಗಿಗಳು, ಸಾರ್ವಜನಿಕರ ಬಸ್ ತಂಗುದಾನ ಆಶ್ರಯತಾಣವಾಗಿದೆ ಆದರೆ ಇದರ ಸಮೀಪದಲ್ಲಿ ಇಂತಹ ಕೃತ್ಯ ನಡೆಸುತ್ತಿರುವುದು ವಿಪರ್ಯಾಸ. ಈ ಬಗ್ಗೆ ಕಠಿಣ ಕ್ರಮ ವಹಿಸಬೇಕು. ಗ್ರಾಮ ಪಂಚಾಯತ್ ಸಿಸಿ ಕ್ಯಾಮರ ಅಳವಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವಾಮಾಚಾರ ಪದೇ ಪದೇ ಈ ಪರಿಸರದಲ್ಲಿ ನಡೆಯುತ್ತಿದ್ದು ಸಾರ್ವಜನಿಕರಿಗೆ ಭಯ ಉಂಟುಮಾಡಿದೆ. ತೆಂಗಿನಕಾಯಿ-ಕುಂಬಳಕಾಯಿ ಸಹಿತ ವಿವಿಧ ವಸ್ತುಗಳ ಮಾರ್ಗ ಬದಿಯಲ್ಲಿ ಸಾರ್ವಜನಿಕರಿಗೆ ಕಾಣಸಿಗುತ್ತಿದೆ. ಕಿಡಿಗೇಡಿಗಳ ಈ ಕೃತ್ಯಕ್ಕೆ ಕಡಿವಾಣ ಬೀಳಬೇಕು ಎಂದು ಸಾರ್ವಜಿಕರು ಆಗ್ರಹಿಸುತ್ತಿದ್ದು ಸಂಬಂಧ ಪಟ್ಟ ಅಧಿಕಾರಿಗಳು, ಗ್ರಾಮ ಪಂಚಾಯತ್, ಪೊಲೀಸ್ ಮತ್ತು ಅರಣ್ಯ ಇಲಾಖೆಯವರು ಗಮನಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.