September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬದ್ಯಾರು ಹಿಬರೋಡಿ ಅನುಗ್ರಹ ನಿಲಯ ವಠಾರದಲ್ಲಿ ಸಂಭ್ರಮ ಸಡಗರದಿಂದ ನಡೆದ ‘ಹಿಬರೋಡಿ ಯಕ್ಷೋತ್ಸವ’

ಬೆಳ್ತಂಗಡಿ: ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ, ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಹಾಗೂ ಶ್ರೀ ಮಹಾಗಣಪತಿ ದೇವರ ಸೇವಾರ್ಥವಾಗಿ ಹಿಬರೋಡಿ ಯಕ್ಷೋತ್ಸವ ಕಾರ್ಯಕ್ರಮ ಜ.29 ರಂದು ಶ್ರೀಮತಿ ಮತ್ತು ದೇವದಾಸ್ ಶೆಟ್ಟಿ ಅನುಗ್ರಹ ನಿಲಯ ಹಿಬರೋಡಿ ಬದ್ಯಾರು ಇವರ ನೇತೃತ್ವದಲ್ಲಿ ಆದ್ದೂರಿಯಾಗಿ ಜರುಗಿತು.

ಬೆಳಿಗ್ಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರನ್ನು ಅನುಗ್ರಹ ಮನೆ ವಠಾರಕ್ಕೆ ಬರಮಾಡಿಕೊಳ್ಳಲಾಯಿತು. ಮಧ್ಯಾಹ್ನ 12 ಕ್ಕೆ ಶ್ರೀ ಮಹಾಗಣಪತಿ ದೇವರಿಗೆ ಹೋಮ, ಮಧ್ಯಾಹ್ನ ಮಹಾಪೂಜೆ ಬಳಿಕ ಸಾರ್ವಜನಿಕ ಪ್ರಸಾದ ಭೋಜನ ಕಾರ್ಯಕ್ರಮ ನಡೆಯತು.

ಸಂಜೆ 6 ಕ್ಕೆ ಯಕ್ಷಗಾನ ಮೇಳದ ಚೌಕಿಯಲ್ಲಿ ಮಹಾಗಣಪತಿ ದೇವರಿಗೆ ವಿಶೇಷ ಪೂಜೆ ನಡೆದು ಯಕ್ಷಗಾನ ಆರಂಭಗೊಂಡಿತು. ಸಾರ್ವಜನಿಕ ಪ್ರಸಾದ ಭೋಜನಾ ಕಾರ್ಯಕ್ರಮ ಜರುಗಿತು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ “ಸಹಸ್ರ ಕವಚ ಮೋಕ್ಷ ” ಎಂಬ ಪುರಾಣ ಕಥಾ ಭಾಗವನ್ನು ಸೇವೆ ಬಯಲಾಟವಾಗಿ ಪ್ರದರ್ಶನಗೊಂಡಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಆಗಮಿಸಿದಾಗ ಶ್ರೀಮತಿ ಮತ್ತು ದೇವದಾಸ್ ಶೆಟ್ಟಿ, ಮೋಹನ್ ಶೆಟ್ಟಿ ಹಾಗೂ ಕುಟುಂಬಸ್ಥರು ಅವರನ್ನು ಆದರದಿಂದ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ಗಣ್ಯರು, ಸಂಘ-ಸಂಸ್ಥೆಯವರು, ಊರಿನ ನಾಗರಿಕರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಯಕ್ಷಗಾನವನ್ನು ವೀಕ್ಷಿಸಿದರು.

Related posts

ಕೊಕ್ಕಡ: ಮಜ್ದೂರ್ ಸಂಘದ ಕೊಕ್ಕಡ ವಲಯದ ನೂತನ ಕಛೇರಿಯ ಉದ್ಘಾಟನೆ

Suddi Udaya

ಬಳಂಜ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಸಿ.ಎಸ್.ಸಿ ಕೇಂದ್ರ ಸ್ಥಳಾಂತರಗೊಂಡು ಉದ್ಘಾಟನೆ

Suddi Udaya

ಮಲವಂತಿಗೆ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya

ಮೇ 24: ವೇಣೂರು ವಿದ್ಯುತ್ ನಿಲುಗಡೆ

Suddi Udaya

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಸ್ತ್ರೀ ಶಕ್ತಿ ಸಂವರ್ಧನಾ ತರಬೇತಿ

Suddi Udaya

ಬೆಳ್ತಂಗಡಿ ಲಯನ್ಸ್ ಹಾಗೂ ಲಿಯೋ ಕ್ಲಬ್ ವತಿಯಿಂದ ಮಾದಕ ವಸ್ತುಗಳ ಜಾಗೃತಿ ಶಿಬಿರ

Suddi Udaya
error: Content is protected !!