ಅಳದಂಗಡಿ: ಸಂಸ್ಕಾರ ಭಾರತಿ ಬೆಳ್ತಂಗಡಿ ಮತ್ತು ಹನುಮೋತ್ಸವ ಸಮಿತಿ ಅಳದಂಗಡಿ ಇದರ ವತಿಯಿಂದ ಹನುಮೋತ್ಸವ ಕಾರ್ಯಕ್ರಮವು ಅಳದಂಗಡಿ ಸತ್ಯದೇವತಾ ದೈವಸ್ಥಾನದ ಮೈದಾನದಲ್ಲಿ ಎ 12 ರಂದು ನಡೆಯಿತು.

ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಪೀಠಾಧಿಪತಿ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರು ಮಹಾಭಿವಂದ್ಯ ಗೌರಾಭಿವಂದನೆ ಸ್ವೀಕರಿಸಿ ತ್ಯಾಗದ ತುತ್ತ ತುದಿಯಲ್ಲಿ ಶ್ರದ್ದಾ ಭಕ್ತಿಯ ಸೇವೆ ಮಾಡಿದಾಗ ಭಗವಂತನನ್ನು ಕಾಣಲು ಸಾಧ್ಯವಿದೆ ಎಂದು ಆಶೀರ್ವಾದ ನೀಡಿದರು.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ಅಯೋಧ್ಯೆಯಲ್ಲಿ ರಾಮೋತ್ಸವ ನಡೆದ ಬೆನ್ನಲ್ಲೇ ಇಲ್ಲಿ ರಾಮನ ಭಕ್ತ ಹನುಮಂತನ ಹನುಮೋತ್ಸವ ನಡೆದಿದೆ.ಸನಾತನ ಹಿಂದೂ ಧರ್ಮದ ಶಕ್ತಿಯನ್ನು ಹೆಚ್ಚಿಸುತ್ತಿರುವ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಪೀಠಾಧಿಪತಿ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರು ಒರ್ವ ಅದ್ಬುತ ಸನ್ಯಾಸಿ, ಅವರಿಗೆ ಗೌರವದ ಸ್ಥಾನ ಸಿಕ್ಕಿದೆ.ಇದು ನಮಗೆಲ್ಲ ಹೆಮ್ಮೆಯ ವಿಚಾರ ಎಂದರು.ಶಾಸಕ ಹರೀಶ್ ಪೂಂಜ ಮಾತನಾಡಿ ಹಿಂದೂ ಹಿಂದುತ್ವ ಉಳಿಯುವಲ್ಲಿ ಧಾರ್ಮಿಕ ಆಚರಣೆಯ ಪರಂಪರೆಯಿಂದ ಸಾಧ್ಯವಾಗಿದೆ. ಹನುಮೋತ್ಸವ ಹಿಂದೂ ಸಮಾಜಕ್ಕೆ ಶಕ್ತಿ ನೀಡುವ ಕಾರ್ಯಕ್ರಮ ಎಂದರು.

ವೇದಿಕೆಯಲ್ಲಿ ಬಳ್ಳಮಂಜ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಹರ್ಷ ಸಂಪಿಗೆತ್ತಾಯ, ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಯುವ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ, ಪ್ರಗತಿಪರ ಕೃಷಿಕ ಗಂಗಾಧರ ಮಿತ್ತಮಾರ್,ಪ್ರಸಿದ್ದ ವೈದ್ಯರಾದ ಡಾ. ಎನ್.ಎಮ್ ತುಳಪುಳೆ, ಶಶಿಧರ ಡೋಂಗ್ರೆ, ಉದ್ಯಮಿ ಯೋಗೀಶ್ ಕುಮಾರ್ ಕಡ್ತಿಲ ಉಪಸ್ಥಿತರಿದ್ದರು.
ಹನುಮೋತ್ಸವ ಸಮಿತಿ ಅಧ್ಯಕ್ಷ ಸಂಪತ್ ಬಿ ಸುವರ್ಣ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ, ವಂದಿಸಿದರು.