23.3 C
ಪುತ್ತೂರು, ಬೆಳ್ತಂಗಡಿ
March 7, 2026
ಅಭಿನಂದನೆಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಸಂಘ-ಸಂಸ್ಥೆಗಳು

ಟೀಮ್ ನವ ಭಾರತ್ ಬೆಳ್ತಂಗಡಿ ಆಶ್ರಯದಲ್ಲಿ ದಿವಂಗತ ತುಷಾರ್ ಕೆ ಇವರ ಸ್ಮರಣಾರ್ಥ ತಾಲೂಕು ಮಟ್ಟದ ಹೊನಲ ಬೆಳಕಿನ ವಾಲಿಬಾಲ್ ಪಂದ್ಯಾಟ

ಬೆಳ್ತಂಗಡಿ: ಟೀಮ್ ನವಭಾರತ್ ಬೆಳ್ತಂಗಡಿ ಆಶ್ರಯದಲ್ಲಿ ಬೆಳ್ತಂಗಡಿ ವಾಲಿಬಾಲ್ ಅಸೋಸಿಯೇಷನ್ ಸಹ ಭಾಗಿತ್ವದಲ್ಲಿ ದಿ. ತುಷಾರ್ ಕೆ ಸ್ಪರಣಾರ್ಥ ಬೆಳ್ತಂಗಡಿ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವು ಎ. 12ರಂದು ವಾಣಿ ಪದವಿ ಪೂರ್ವ ಕ್ರೀಡಾಂಗಣದಲ್ಲಿ ಜರಗಿತು.

ಪ್ರಥಮ ರೂ.14000 ನಗದು ಮತ್ತು ಟ್ರೋಪಿಯನ್ನು ಸಿ.ಎಂ.ಎ. ಗೇರುಕಟ್ಟೆ ತಂಡ, ದ್ವಿತೀಯ ರೂ.10000 ನಗದು ಮತ್ತು ಟ್ರೋಪಿಯನ್ನು ಆರ್.ಜೆ ಫ್ರೆಂಡ್ಸ್ ಪಡೆದುಕೊಂಡಿತು. ಇತರ ತಂಡಗಳು ತೃತೀಯ ರೂ.7000 ನಗದು ಮತ್ತು ಟ್ರೋಪಿ, ಚತುರ್ಥ ರೂ.4000 ನಗದು ಮತ್ತು ಟ್ರೋಫಿಯನ್ನು ಪಡೆದುಕೊಂಡಿವು.

ಸಮಾರೋಪ ಸಮಾರಂಭದಲ್ಲಿ ಟ್ರೋಪಿಯನ್ನು ಮುಖ್ಯ ಅತಿಥಿಗಳಾದ ಸುದ್ದಿ ಉದಯದ ವಾರಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕ ತುಕಾರಾಮ್ ವಿತರಿಸಿದರು. ಈ ಸಂದರ್ಭದಲ್ಲಿ ಟೀಮ್ ನವ ಭಾರತ್ ಬೆಳ್ತಂಗಡಿಯ ಸುವಿತ್, ಸನಾಲ್, ವಿನ್ಯಾಸ್, ಸುಮಂತ್, ಪ್ರಜ್ವಲ್ ಮೋಕ್ಷಿತ್, ಹರೀಶ್ ಗೌಡ ಉಪಸ್ಥಿತರಿದ್ದರು.

Related posts

ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಬಗ್ಗೆ ಅಶ್ಲೀಲ ಪದ ಬಳಕೆ ಆರೋಪ: ಮಹಿಳಾ ಕಾಂಗ್ರೆಸ್‌ನಿಂದ ದೂರು

Suddi Udaya

ಗುರುವಾಯನಕೆರೆ ಎಕ್ಸೆಲ್ ಟೆಕ್ನೋ ಸ್ಕೂಲ್ ಪ್ರಾರಂಭೋತ್ಸವ, ಅದ್ಧೂರಿಯಾಗಿ ವಿದ್ಯಾರ್ಥಿಗಳಿಗೆ ಸ್ವಾಗತ

Suddi Udaya

ಕನ್ಯಾಡಿ ll ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

Suddi Udaya

ಸಾರ್ವಜನಿಕರಿಗಾಗಿ CPR ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮ

Suddi Udaya

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ಮಹಿಳೆಯ ಬ್ಯಾಗಿನಲ್ಲಿದ್ದ ಪರ್ಸಿನಿಂದ ರೂ 2.16ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ರೂ. 5 ಸಾವಿರ ನಗದು ಕಳವು

Suddi Udaya

ಪುದುವೆಟ್ಟು ಗ್ರಾಮ ಸಭೆ: ಕಂದಾಯ ಇಲಾಖೆಯ ಅಧಿಕಾರಿಗಳ ಗೈರು, ಗ್ರಾಮಸ್ಥರು ಅಕ್ರೋಶ

Suddi Udaya
error: Content is protected !!