ಕನ್ಯಾಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವಾರ್ಷಿಕ ಸಭೆಯು ಜನಾರ್ಧನ ಗೌಡ ಕಡ್ತಿಯಾರು ಇವರ ಮನೆಯಲ್ಲಿ ಎ. 12ರಂದು ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಕನ್ಯಾಡಿ ಗ್ರಾಮ ಸಮಿತಿಯ ಅಧ್ಯಕ್ಷ ಆನಂದ ಗೌಡ ವಹಿಸಿದ್ದರು, ವೇದಿಕೆಯಲ್ಲಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಜೊತೆ ಕಾರ್ಯದರ್ಶಿ ಶ್ರೀನಾಥ್ ಕೆ.ಎಂ., ನಿರ್ದೇಶಕ ವಸಂತ ಗೌಡ, ಊರ ಗೌಡರಾದ ಅಣ್ಣು ಗೌಡ, ವಾಣಿ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಪ್ರಸಾದ್ ಕಡ್ತಿಯಾರ್, ಜನಾರ್ದನ ಗೌಡ, ತನಿಯಪ್ಪ ಗೌಡ, ಪ್ರವೀಣ್ ವಿ.ಜೆ. ಉಪಸ್ಥಿತರಿದ್ದರು.

ನಡ – ನಾವೂರು ಗ್ರಾಮ ಸಹಾಯಕಿಯಾಗಿ ನೇಮಕವಾದ ಆಶಾ ಮತ್ತು ಪಿಯುಸಿಯಲ್ಲಿ ಪಾಸಾಗಿರುವ ಯಶ್ಚಿತಾರವರನ್ನು ಗ್ರಾಮ ಸಮಿತಿಯ ಪರವಾಗಿ ಅಭಿನಂದಿಸಲಾಯಿತು. ಏ. 20ರಂದು ವಾಣಿ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡದ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆಯನ್ನು ವಿತರಿಸಲಾಯಿತು