

ಕೊಕ್ಕಡ: ಇಲ್ಲಿಯ ಮಾಸ್ತಿಕಲ್ಲುಮಜಲು ಶ್ರೀ ಪಿಲಿಚಾಮುಂಡಿ ಹಾಗೂ ಸಹ ಪರಿವಾರ ದೈವಗಳ ಸೇವಾ ಟ್ರಸ್ಟ್ ವತಿಯಿಂದ
ಶ್ರೀ ಪಿಲಿಚಾಮುಂಡಿ ಮತ್ತು ಸಹ ಪರಿವಾರ ಗ್ರಾಮ ದೈವಗಳ ನೇಮೋತ್ಸವವು ಎ.12 ರಂದು ನಡೆಯಿತು.


ಈ ಸಂದರ್ಭದಲ್ಲಿ ರಘುಚಂದ್ರ ತೋಡ್ತಿಲ್ಲಾಯ ಹಿರ್ತರ ಗುತ್ತು, ಶಬರಾಯ ಸಹೋದರರು , ರಾಮಯ್ಯ ನಾಯಕ್, ಮಹಾಬಲ ನಾಯಕ್ ಆಡಳಿತ ಮೊಕ್ತೇಸರ ಪುರುಷೋತ್ತಮ ಪೊಡಿಕೆತ್ತೂರು, ಗೌರವಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಅಧ್ಯಕ್ಷ ಕುಶಾಲಪ್ಪ ಗೌಡ ಪೊಡಿಕೆತ್ತೂರು, ಕಾರ್ಯದರ್ಶಿ ಹರೀಶ್ ಎಳ್ಳುಗದ್ದೆ ಹಾಗೂ ಊರ -ಪರವೂರ ಗ್ರಾಮಸ್ಥರು ಉಪಸ್ಥಿತರಿದ್ದರು.
