
ಬೆಳ್ತಂಗಡಿ: ಅಂಗನವಾಡಿ ಕೇಂದ್ರ ಸುದೇಮುಗೇರುನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ 134ನೇ ವರ್ಷದ ಜನ್ಮದಿನಾಚರಣೆಯನ್ನು ವಾರ್ಡ್ ಸದಸ್ಯ ಜಗದೀಶ್ ಡಿ. ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ದೀಪ ಬೆಳಗಿಸುವುದರ ಮೂಲಕ ದಲಿತ ಸಂಘರ್ಷ ಸಮಿತಿಯ ಮೈಸೂರು ವಿಭಾಗದ ಪ್ರಾಂತೀಯ ಸಂಚಾಲಕರಾದ ಬಿ.ಕೆ ವಸಂತರವರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ಆರ್. ರಮೇಶ್, ದಲಿತ ಸಂಘರ್ಷ ಸಮಿತಿ ಮಾಜಿ ಸಂಚಾಲಕರಾದ ಸಂಜೀವ ರೆಂಕೆದಗುತ್ತು, ಗಣೇಶ್ ಮಾಸ್ಟರ್ ಸುದೇಮುಗೇರು ಭಾಗವಹಿಸಿ ಶುಭ ಹಾರೈಸಿದರು.

ಅಂಗನವಾಡಿ ಮಕ್ಕಳ ಪ್ರತಿಭಾ ವಿಕಸನಕ್ಕೆ ಪೂರಕವಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮವನ್ನು ಮತ್ತು 12 ರಿಂದ 18 ವರ್ಷದ ಕಿಶೋರಿಯವರಿಗೆ ಸ್ಫರ್ಧಾ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಸುಮಾರು 26 ಮಂದಿಗೆ ಬಹುಮಾನವನ್ನು ವಿತರಿಸಲಾಯಿತು.


ಜಿ.ಪಂ ಇಂಜಿನಿಯರಿಂಗ್ ವಿಭಾಗದ ಸಿಬ್ಬಂದಿ ಅಶೋಕ್ ಸ್ವಾಗತಿಸಿದರು. ಶಿಕ್ಷಕಿ ದಿವ್ಯ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಸಹಾಯಕಿ ರೋಹಿಣಿ ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಭಾಗವಹಿಸಿದ 65 ಮಂದಿಗೆ ಉಪಹಾರದ ವ್ಯವಸ್ಥೆ ಒದಗಿಸಲಾಯಿತು. ಎಲ್ಲಾ ಕಾರ್ಯಕ್ರಮಗಳು ವಾರ್ಡ್ ಸದಸ್ಯ ಜಗದೀಶ್ ಡಿ. ಅವರ ನೇತೃತ್ವಲ್ಲಿ ನಡೆಯಿತು