ಸೋಣಂದೂರು :ಇಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಳೇ ವಿದ್ಯಾರ್ಥಿ ಸಂಘದ ಸಹಭಾಗಿತ್ವದಲ್ಲಿ ಏಳನೆಯ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೋಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ನಾಗೇಶ್ ಗೌಡ, ಉಪಾಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ,ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರೋಷನ್ ಲೋಬೊ ಹಾಗೂ ಕಾರ್ಯದರ್ಶಿಯಾದ ಸಂಧ್ಯಾ ಶೆಟ್ಟಿ, ಮುಖ್ಯ ಶಿಕ್ಷಕರಾದ ಅನಿತಾ ರೇಷ್ಮಾ ಡಿಸೋಜಾ ಹಾಗೂ ಸಹ ಶಿಕ್ಷಕಿಯರಾದ ರಕ್ಷಾ, ರಶ್ಮಿ, ಸವಿತಾ , ಮಹಮ್ಮಾಯಿ ಕಟ್ಟೆ ಫ್ರೆಂಡ್ಸ್ ಇದರ ಅಧ್ಯಕ್ಷರಾದ ರಾಜೇಶ್ ಕುಲಾಲ್, ಸ್ಥಳೀಯರಾದ ಉಪೇಂದ್ರ ಆಚಾರ್ಯ ಉಪಸ್ಥಿತರಿದ್ದರು.
ಪರಿಚಯ ಅಕಸ್ಮಿಕವಾದರೂ ಅಗಲುವಿಕೆ ಅನಿವಾರ್ಯ ಎಂಬ ಮಾತಿನಂತೆ ತಮ್ಮ ಉನ್ನತ ವಿದ್ಯಾಭ್ಯಾಸಕ್ಕಾಗಿ ಈ ಶಾಲೆಯನ್ನು ತೊರೆದು ಬೇರೆ ಶಾಲೆಗೆ ಸೇರ್ಪಡೆಗೊಳ್ಳಲಿರುವ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹೇಳುವುದರ ಜೊತೆಗೆ ತಮ್ಮ ಸವಿ ನೆನಪಿಗಾಗಿ ಶಾಲೆಗೆ ಫ್ಯಾನ್ ಹಾಗೂ ಕುರ್ಚಿಗಳನ್ನು ಉಡುಗೊರೆಯಾಗಿ ನೀಡಿರುತ್ತಾರೆ.
ಕಾರ್ಯಕ್ರಮಕ್ಕೆ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರೋಷನ್ ಲೋಬೊ ಹಾಗೂ ಉಪಾಧ್ಯಕ್ಷ ಪ್ರಕಾಶ್ ಪ್ರಭು ಇವರು ಬೆಳಗಿನ ಉಪಹಾರ ವ್ಯವಸ್ಥೆ, ಬಿಳ್ಕೊಳ್ಳುವಂತಹ ವಿದ್ಯಾರ್ಥಿಗಳಿಗೆ ಉಪೇಂದ್ರ ಆಚಾರ್ಯ ಇವರು ಫೋಟೋ ಫ್ರೇಮ್ ನೀಡಿದ್ದು, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬೀಳ್ಕೊಡುಗೆ ಸಮಾರಂಭವು ಪೂರ್ಣಗೊಂಡಿತು.
ಹಳೇ ವಿದ್ಯಾರ್ಥಿ ಸಂಘದ ಸದಸ್ಯರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಈ ಕಾರ್ಯಕ್ರಮವನ್ನು 6ನೇ ತರಗತಿಯ ಆಯಿಷಾತ್ ಅಝ್ಮಮಿಯ ನಿರೂಪಿಸಿ, ಯಜ್ಞಶ್ರೀ ಸ್ವಾಗತಿಸಿ, ಫಾತಿಮಾತ್ ರಿಫಾ ವಂದನಾರ್ಪಣೆಗೈದರು. ಹಳೇ ವಿದ್ಯಾರ್ಥಿಗಳ ಸಭೆಯು ನಡೆದಿದ್ದು ಮುಂದಿನ ಶೈಕ್ಷಣಿಕ ವರ್ಷದ ದಾಖಲಾತಿ, ಪ್ರಾರಂಭೋತ್ಸವ ಹಾಗೂ ಶಾಲಾ ಚಟುವಟಿಕೆಗಳ ಪೂರ್ವ ತಯಾರಿ ಬಗ್ಗೆ ಚರ್ಚಿಸಲಾಯಿತು