April 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಲೈಫ್‌ಸ್ಟೈಲ್‌ವರದಿ

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಉದ್ಯಮಶೀಲತಾ ಅಭಿವೃದ್ಧಿ- ಮದುಮಗಳ ಶೃಂಗಾರ ತರಬೇತಿಯ ಸಮಾರೋಪ ಸಮಾರಂಭ

ಉಜಿರೆ : ನೀವು ಮಾಡುವ ಉದ್ಯಮದಲ್ಲಿ ಅದನ್ನು ನಡೆಸುವಾಗ ಎಲ್ಲ ರೀತಿಯಲ್ಲಿ ಸಮತೋಲನ ಕಾಯ್ದುಕೊಂಡು ಮುಂದುವರೆಯಬೇಕು. ಜೊತೆಯಲ್ಲಿ ಇತರರು ನಿಮಗೆ ಸ್ಪೂರ್ತಿದಾಯಕ ವಾದ ಪ್ರೋತ್ಸಾಹ ನೀಡುತ್ತಾ ಇದ್ದರೆ ಹಾಗೂ ನಿಮ್ಮ ಪ್ರಯತ್ನ ಕೊಡಿಕೊಂಡರೆ ಖಂಡಿತವಾಗಿ ನೀವು ಯಶಸ್ವಿಯಾಗಿ ಉದ್ಯಮ ನಡೆಸಬಹುದು. ಇದಕ್ಕೆ ಪೂರಕವಾಗಿ ಡಾ|. ಡಿ.ವೀರೇಂದ್ರ ಹೆಗ್ಗಡೆಯವರು ದೂರ ದೃಷ್ಟಿ ಈ ರುಡ್ ಸೆಟ್ ಸಂಸ್ಥೆ ಯು ನಿಮಗೆ ನಿರಂತರವಾಗಿ ನಿಮ್ಮ ಹಿಂದೆ ಇದ್ದು ಮಾಹಿತಿ-ಮಾರ್ಗದರ್ಶನ ನೀಡುತ್ತದೆ. ಬಹುಶ ಇಂದು ಇಡೀ ದೇಶದಲ್ಲಿ ರುಡ್ಸೆಟ್ ಸಂಸ್ಥೆಯ ಮೂಲಕ ತರಬೇತಿ ಪಡೆದ ಕೋಟ್ಯಂತರ ಯುವಜನರು ಯಶ್ವಸಿಯಾಗಿ ಉದ್ಯಮಶೀಲರಾಗಿದ್ದಾರೆ. ಇದು ಗ್ರಾಮೀಣ ಭಾಗ ಮಹಿಳೆಯರಿಗೆ ಸಹ ತುಂಬಾ ಪ್ರಯೋಜನಕಾರಿಯಾಗಿದೆ. ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಡಾ| ವಿಶ್ವನಾಥ ಪಿ ಅಭಿಪ್ರಾಯ ಪಟ್ಟರು.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 06 ದಿನಗಳ ಕಾಲ ನಡೆದ ಉದ್ಯಮಶೀಲತಾ ಅಭಿವೃದ್ಧಿ- ಮದುಮಗಳ ಶೃಂಗಾರ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಿ, ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಆಶಯದಂತೆ ನಡೆದ ಈ ತರಬೇತಿ ನಿಮಗೆ ಹೆಚ್ಚು ಉಪಯೋಗವಾಗಲಿ ಎಂದು ಶುಭ ಹಾರೈಸಿದರು.

ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ತರಬೇತಿಯ ಹಿನ್ನೋಟ ನೀಡಿ, ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಶಿಬಿರಾರ್ಥಿ ಶ್ರೀಮತಿ ಸೌಮ್ಯ, ಕುಮಾರಿ ನೇಹಾ, ಶ್ರೀಮತಿ ಚೇತನಾ, ಕುಮಾರಿ ಚೈತ್ರ ಅವರುಗಳು ಪ್ರಾರ್ಥನೆ ನೇರವೇರಿಸಿದರು. ಶ್ರೀಮತಿ ಸೌಮ್ಯಲತಾ, ಶ್ರೀಮತಿ ಸುನೀತ, ಕುಮಾರಿ ಸಮೀನಾ ತರಬೇತಿಯ ಅನುಭವ ಹಂಚಿಕೊಂಡರು.

Related posts

ಉಜಿರೆಯಲ್ಲಿ ಡಾ| ಸೂರಜ್ ರವರ ಡೆಂಟಲ್ ಕ್ಲಿನಿಕ್ ಶುಭಾರಂಭ

Suddi Udaya

ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಸರಕಾರಿ ಶಾಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

Suddi Udaya

ವಾಣಿ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್ ಕೌಸರ್ ಮೌಲ್ಯಮಾಪನದಲ್ಲಿ ತಾಲೂಕಿಗೆ ಪ್ರಥಮ, ರಾಜ್ಯಕ್ಕೆ 7ನೇ ಸ್ಥಾನ

Suddi Udaya

ಅಳದಂಗಡಿ ಶ್ರೀ ಮಹಾಗಣಪತಿ ದೇವರ ಬ್ರಹ್ಮ ಕಲಶೋತ್ಸವ

Suddi Udaya

ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಕೊಯ್ಯೂರು ಸಿಎ ಬ್ಯಾಂಕಿಗೆ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಸರಳಿಕಟ್ಟೆ ಗೈಸ್ ವತಿಯಿಂದ 175 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ.

Suddi Udaya
error: Content is protected !!