24.4 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಯ ಬಾಲಕ ಬಾಲಕಿಯರ ನೂತನ ಶೌಚಾಲಯದ ಹಸ್ತಾಂತರ

ಕುವೆಟ್ಟು: ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುವೆಟ್ಟು, ಗ್ರಾಮ ಪಂಚಾಯತ್ ಕುವೆಟ್ಟು, ನರೇಗಾ ಮತ್ತು ಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ ಮಂಜೂರಾದ ಬಾಲಕ ಬಾಲಕಿಯರ ನೂತನ ಶೌಚಾಲಯದ ಹಸ್ತಾಂತರ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದಲ್ಲಿ ಕುವೆಟ್ಟು ಗ್ರಾ. ಪಂ. ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿ , ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಜಯ, ಕುವೆಟ್ಟು ಗ್ರಾ.ಪಂ. ಉಪಾಧ್ಯಕ್ಷ ಗಣೇಶ್, ಸದಸ್ಯರಾದ ಸಿಲ್ವೆಸ್ಟರ್ ಮೋನಿಸ್, ಅಮೀನಾ, ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ಸಿರಾಜ್ ಎಂ ಚಿಲಿಂಬಿ, ಉಪಾಧ್ಯಕ್ಷೆ ಲಾವಣ್ಯ ಶೆಟ್ಟಿ ಅರ್ಕಜೆ, ಶಿಕ್ಷಣ ಸಂಯೋಜಕ ಚೇತನಾಕ್ಷಿ, ಮುಖ್ಯ ಶಿಕ್ಷಕ ಭಾಸ್ಕರ್, ಎಸ್ ಡಿ ಎಂ ಸಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ಧವಲಾ ಎ‌ ನಿರೂಪಿಸಿ, ಶಿಕ್ಷಕಿ ಕನ್ಸೆಪ್ಟ ಪಿಂಟೊ ವಂದಿಸಿದರು.

Related posts

ಪುಂಜಾಲಕಟ್ಟೆ-ಚಾರ್ಮಾಡಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಸುವ ನೌಕರರಿಗೆ 3 ತಿಂಗಳ ಸಂಬಳ ನೀಡದೆ ಸತಾಯಿಸುತ್ತಿರುವ ಡಿಪಿ ಕಂಪನಿ: ಕಾರ್ಮಿಕರ ಆಕ್ರೋಶ, ಪ್ರತಿಭಟನೆ

Suddi Udaya

ಎರಡು ದ್ವಿಚಕ್ರ ವಾಹನಗಳಿಗೆ ಇನೋವಾ ಕಾರು ಡಿಕ್ಕಿ: ಪ್ರಾಣಾಪಾಯದಿಂದ ಪಾರಾದ ಸವಾರರು

Suddi Udaya

ಬಳಂಜ:ಎಲ್ಯೊಟ್ಟು ನಲ್ಲಿ ರಬ್ಬರ್ ತೋಟಕ್ಕೆ ಆಕಸ್ಮಿಕ ಬೆಂಕಿ

Suddi Udaya

ಮುಂಡಾಜೆ: ರೋವರ್ಸ್ ಮತ್ತು ರೇಂಜರ್ಸ್ ಘಟಕದ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ

Suddi Udaya

ಕು| ಸೌಜನ್ಯಳಿಗೆ ನ್ಯಾಯ ಸಿಗಬೇಕು ಎಂಬುದು ನಮ್ಮೆಲ್ಲರ ಆಗ್ರಹ: ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಖಾವಂದರಿಗೆ ಕಳಂಕ ಹಚ್ಚುವುದನ್ನು ನಾವು ಖಂಡಿಸುತ್ತೇವೆ: ಧರ್ಮಸ್ಥಳ ಪೊಲೀಸ್ ಠಾಣೆ ಹಾಗೂ ಗ್ರಾಮ ಪಂಚಾಯತ್‌ಗೆ ಗ್ರಾಮಸ್ಥರಿಂದ ಮನವಿ

Suddi Udaya

ವೇಣೂರು: ಮಜಲಡ್ಡ ನಿವಾಸಿ ಚೆನ್ನಪ್ಪ ಪೂಜಾರಿ ನಿಧನ

Suddi Udaya
error: Content is protected !!