24.4 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ತಾಲೂಕು ಪಂಚಾಯತ್ ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ರವರ 134 ನೇ ಜನ್ಮದಿನಾಚರಣೆ

ಬೆಳ್ತಂಗಡಿ: ತಾಲೂಕು ಆಡಳಿತ, ಬೆಳ್ತಂಗಡಿ ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಬೆಳ್ತಂಗಡಿ ಪಟ್ಟಣ ಪಂಚಾಯತ್ ಇದರ ಸಂಯುಕ್ತ ಆಶ್ರಯದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ. ಬಿ.ಆರ್‌. ಅಂಬೇಡ್ಕರ್ ರವರ 134ನೇ ಜನ್ಮದಿನಾಚರಣೆ ಎ.14 ರಂದು ಬೆಳ್ತಂಗಡಿ ತಾಲೂಕು ಪಂಚಾಯತ್ ನಲ್ಲಿ ನಡೆಯಿತು.

ಶಾಸಕ ಹರೀಶ್ ಪೂಂಜ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೇದಿಕೆಯಲ್ಲಿ ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಹ ಶಿಕ್ಷಕ ಅರವಿಂದ ಚೊಕ್ಕಾಡಿ ಮುಖ್ಯ ಭಾಷಣ ಮಾಡಿದರು. ತಹಶೀಲ್ದಾರ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಪೃಥ್ವಿ ಸಾನಿಕಂ, ತಾ.ಪಂ.ಇಓ ಭವಾನಿ ಶಂಕರ್ ಎನ್., ಪ.ಪಂ.ಮುಖ್ಯಾಧಿಕಾರಿ ರಾಜೇಶ್ ಕೆ., ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಮಾಲಾಡಿ ಹಾಗೂ ಬೆಳ್ತಂಗಡಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಧನಂಜಯ ಎನ್.ಎಸ್. ಉಪಸ್ಥಿತರಿದ್ದರು.

ದಲಿತ ಸಂಘದ ಮುಖಂಡರು, ಪ್ರತಿನಿಧಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಇಲಾಖೆಗಳ ಸಿಬ್ಬಂದಿಗಳು, ಪ್ರಾಂಶುಪಾಲರು ಹಾಜರಿದ್ದರು.

ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಮುರಳೀಧರ್ ಸ್ವಾಗತಿಸಿ, ವಸತಿ ನಿಲಯದ ಮೇಲ್ವಿಚಾರಕಿ ಹೇಮಾಲತಾ ನಿರೂಪಿಸಿದರು.

Related posts

ನಡ ಸರಕಾರಿ ಪ್ರೌಢಶಾಲೆಯಲ್ಲಿ ನೀರು ನೈರ್ಮಲ್ಯ ಸ್ವಚ್ಛ ಗ್ರಾಮ ಚಿತ್ರ ಪ್ರದರ್ಶನ ಮತ್ತು ಮಾಹಿತಿ ಕಾರ್ಯಾಗಾರ

Suddi Udaya

ನಡ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಮಿತಿಯಿಂದ ದಿ. ಕೆ ವಸಂತ ಬಂಗೇರರಿಗೆ ನುಡಿನಮನ

Suddi Udaya

ಪುದುವೆಟ್ಟು: ನಡ್ಯೇಲು ಕಾಡಾನೆ ದಾಳಿ : ಅಪಾರ ಕೃಷಿ ಹಾನಿ

Suddi Udaya

ಕಲ್ಮಂಜ : ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ ಕಾರ್ಯಾರಂಭ

Suddi Udaya

ವಕೀಲರ ಸಂಘ ಬೆಳ್ತಂಗಡಿ ಇದರ ನೇತೃತ್ವದಲ್ಲಿ ಕ್ಲಾಸಿಕಲ್ ಟೈಗರ್ಸ್ ಧರ್ಮಸ್ಥಳ ಇವರಿಂದ “ಪಿಲಿಗೊಬ್ಬು” ಕಾರ್ಯಕ್ರಮ

Suddi Udaya

ನಾಳ: ಹಿರಿಯರ ಸೇವಾ ಪ್ರತಿಷ್ಠಾನದ ಸಭೆ

Suddi Udaya
error: Content is protected !!