April 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಲಾಯಿಲ ಶ್ರೀ ರಾಘವೇಂದ್ರ ಸ್ವಾಮಿಗಳ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಲಾಯಿಲ: ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ಏ. 20ರಿಂದ 23ರ ವರೆಗೆ, ನಡೆಯುವ ಮೂರನೇ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದ ರಾಘವೇಂದ್ರ ಮಂಟಪದಲ್ಲಿ ಬಿಡುಗಡೆಗೊಳಿಸಲಾಯಿತು.

2000 ಇಸವಿಯಿಂದ ಪ್ರಾರಂಭವಾದ ಬೆಳ್ತಂಗಡಿಯ ರಾಘವೇಂದ್ರ ಮಠದ ಬೆಳವಣಿಗೆಯನ್ನು ಸವಿಸ್ತಾರವಾಗಿ ಪ್ರಸ್ತಾವಿಸಿದ ಎಸ್ ಡಿ ಎಮ್ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಬಿಎ ಕುಮಾರ ಹೆಗ್ಡೆ ಅವರು ಸವಿಸ್ತಾರವಾಗಿ ತಿಳಿಸಿದರು. ಬ್ರಹ್ಮ ಕಲಶೋತ್ಸವದ ಕಾರ್ಯದಲ್ಲಿ ಭಾಗವಹಿಸುವ ನಾವೆಲ್ಲ ಪುಣ್ಯವಂತರು, ಭಕ್ತಾದಿಗಳು ತನುಮನ ಧನ ದಿಂದ ಸಹಕರಿಸಬೇಕಾಗಿ ಬ್ರಹ್ಮಕಲಶೋತ್ಸವದ ಅಧ್ಯಕ್ಷ ರಕ್ಷಿತ್ ಶಿವರಾಂ ರವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು, ಸದ್ಗುರು ಮಹಾಮಂಡಲೇಶ್ವರ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಸುಬ್ರಹ್ಮಣ್ಯ ಶ್ರೀ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರು , ಖ್ಯಾತ ಚಲನಚಿತ್ರ ನಟ ಶ್ರೀ ವಿಜಯ ರಾಘವೇಂದ್ರ ಹಾಗೂ ಇತರ ಗಣ್ಯರು ನಾಲ್ಕು ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ಅಧ್ಯಕ್ಷತೆ ವಹಿಸಿದ್ದ ಪೀತಾಂಬರ ಹೆರಾಜೆ ಯವರು ತಿಳಿಸಿದರು.

ವೇದಿಕೆಯಲ್ಲಿ, ಬ್ರಹ್ಮ ಕಲಶೋತ್ಸವದ ಕಾರ್ಯದರ್ಶಿ ಕುಶಾಲಪ್ಪ ಗೌಡ, ಪ್ರೊ ಎ ಕೃಷ್ಣಪ್ಪ ಪೂಜಾರಿ, ಎಸ್ ಕೆ ಆರ್ ಡಿ ಪಿ ಯೋಜನಾಧಿಕಾರಿ ಸುರೇಂದ್ರ, ವಿಟ್ಟಲ ಶೆಟ್ಟಿ, ಮುಖ್ಯ ಅರ್ಚಕ ರಾಘವೇಂದ್ರ ಬಾಂಗಿಣ್ಣಾಯ, ಮಹಾಬಲ ಶೆಟ್ಟಿ, ಸಂತೋಷ್ ಕುಮಾರ್ ಲಾಯಲ, ಪ್ರವೀಣ್ ಹಳ್ಳಿಮನೆ, ಸೋಮೇಗೌಡ, ಶ್ರೀಮತಿ ಸುಶೀಲ ಹೆಗ್ಡೆ , ಉಮೇಶ್ ಬಂಗೇರ , ಜಯರಾಮ ಬಂಗೇರ, ಶ್ರವಣ್ ರಾಜ್, ನಿತ್ಯಾನಂದ ನಾವರ , ರವೀಂದ್ರ ಅಮೀನ್ ಹಾಗೂ ಇತರ ಗಣ್ಯರು ಹಾಜರಿದ್ದರು.
ಪ್ರಧಾನ ಕಾರ್ಯದರ್ಶಿ ವಸಂತ ಸುವರ್ಣ ಸ್ವಾಗತಿಸಿ ಜಯಾನಂದ ಲಾಯಿಲ ಧನ್ಯವಾದ ಸಮರ್ಪಿಸಿದರು.

Related posts

ಬೆಳಾಲು ಗ್ರಾ.ಪಂ. ವತಿಯಿಂದ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮನೆ ಮನೆ ಜಾಥಾ ಅಭಿಯಾನ ಮತ್ತು ಸ್ವಚ್ಚತಾ ಕಾರ್ಯಕ್ರಮ

Suddi Udaya

ಶಿರ್ಲಾಲು ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬೆಳ್ತಂಗಡಿ ವಕೀಲ ಮುರಳಿ ಬಿ. ದಂಪತಿಯಿಂದ ಉಚಿತ ಪುಸ್ತಕ ವಿತರಣೆ

Suddi Udaya

ಕೊಕ್ಕಡ: ಹಳ್ಳಿಂಗೇರಿ ನಿವಾಸಿ ದಿನೇಶ್ ನಿಧನ

Suddi Udaya

ವಿಕಲಚೇತನರ ಇಲಾಖೆ ರಾಜ್ಯ ಆಯುಕ್ತೆ ಲತಾ ಕುಮಾರಿ (ಐ.ಎ.ಎಸ್) ಧರ್ಮಸ್ಥಳ ಭೇಟಿ

Suddi Udaya

ಪುಂಜಾಲಕಟ್ಟೆ ಕಟ್ಟೆಮನೆ ಉದಯಕುಮಾರ್ ವಿಧಿವಶ

Suddi Udaya

ಕರಿಮಣೇಲು: ದೇಲಂಪುರಿ ಕ್ಷೇತ್ರದ ವಠಾರದಲ್ಲಿ ವಿವಿಧ ಬಗೆಯ ಗಿಡಗಳ ನಾಟಿ ಕಾರ್ಯಕ್ರಮ

Suddi Udaya
error: Content is protected !!