September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗುರುವಾಯನಕರೆ: ಕಾವ್ಯಶ್ರೀ ಆಜೇರು ಹಾಡಿರುವ “ಮಲೆನಾಡ ಮಡಿಲಿನಲ್ಲಿ” ಜಿನಭಕ್ತಿಗೀತೆ ಲೋಕಾರ್ಪಣೆ

ಗುರುವಾಯನಕೆರೆ: ಭಗವಾನ್ ಶ್ರೀ ೧೦೦೮ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ ಕಾರ್ಮಣ್ಣು ಸಂಸೆ ಇದರ ಪಂಚಕಲ್ಯಾಣದ ಪ್ರಯುಕ್ತ ಕಾರ್ಮಣ್ಣು ಕುಟುಂಬದವರ ಪ್ರಾಯೋಜಕತ್ಚದಲ್ಲಿ ನಿರ್ಮಾಣಗೊಂಡ, ಶ್ರೀಮತಿ ಕಾವ್ಯಶ್ರೀ ಆಜೇರು ಇವರು ಹಾಡಿರುವ “ಮಲೆನಾಡ ಮಡಿಲಿನಲ್ಲಿ. . .” ಎಂಬ ಜಿನಭಕ್ತಿಗೀತೆಯನ್ನು, ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಚೇರ್ಮನ್ ಸುಮಂತ್ ಜೈನ್ ಇವರ ನೇತೃತ್ವದಲ್ಲಿ ಲೋಕಾರ್ಪಣೆಗೊಂಡಿತು.

ಈ ಸಂದರ್ಭದಲ್ಲಿ ಸುಮಂತ್, ಶ್ರೀಮತಿ ಶ್ವೇತಾ ಹಾಗೂ ಶ್ರೀ ಮಲ್ಲಿನಾಥ ಜೈನ್ ಇವರನ್ನು ಗೌರವಿಸಲಾಯಿತು. ಶ್ರೀಮತಿ ಶ್ವೇತಾ ದಿಲೀಪ್ ಇವರ ಸಾಹಿತ್ಯಕ್ಕೆ, ಹಿಮ್ಮೇಳದಲ್ಲಿ ಮದ್ದಳೆಯಲ್ಲಿ ಶ್ರೀ ಜನಾರ್ಧನ ತೋಳ್ಪಾಡಿತ್ತಾಯ, ಚೆಂಡೆಯಲ್ಲಿ ಚಂದ್ರಶೇಖರ, ರೆಕಾರ್ಡಿಂಗ್ ನಲ್ಲಿ ಸೌಂಡ್ ಟ್ರಾಕ್ ಕಲ್ಲಡ್ಕ ಇವರು ಸಹಕರಿಸಿದರು. ಶ್ರೀ ಬಿ. ಭುಜಬಲಿ ಧರ್ಮಸ್ಥಳ ಇವರು ಕಾರ್ಯಕ್ರಮವನ್ನು ಹಾಗೂ ಹಾಡುಗಳನ್ನು ಸಂಯೋಜಿಸಿದರು.


ಶ್ರೀ ಮಲ್ಲಿನಾಥ್ ಜೈನ್, ಶ್ರೀ ಧರ್ಮರಾಜ್ ಧರ್ಮಸ್ಥಳ, ಎಕ್ಸೆಲ್ ನ ಶ್ರೀ ಶಾಂತಿನಾಥ್ ಜೈನ್, ಪ್ರಾಚಾರ್ಯರು, ವಿದ್ಯಾ ರ್ಥಿನಿಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು . ಶ್ರೀಯುತ ಮಲ್ಲಿನಾಥ್ ಜೈನ್ ಅವರು ಕಾರ್ಯಕ್ರಮ ನಿರೂಪಿಸಿದರು . ಶ್ರೀ ಪ್ರಕಾಶ್ ಇವರು ಸಹಕರಿಸಿದರು.

Related posts

ಮಡಂತ್ಯಾರು : ಮಾದಕ ವಸ್ತು ಸೇವನೆಯ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

Suddi Udaya

ವೇಣೂರು : ಟೈಲರ್ ಸಂಜೀವ ಪಾಣೂರು ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿ ಬ್ಲಾಕ್ ಸಮಿತಿಗಳಿಗೆ ಲೋಕಸಭಾ ಚುನಾವಣಾ ಪ್ರಚಾರ ಸಮಿತಿ ಉಸ್ತುವಾರಿಯಾಗಿ ಶಾಹುಲ್ ಹಮೀದ್ ಕೆ.ಕೆ. ಹಾಗೂ ಲೋಕೇಶ್ವರಿ ವಿನಯಚಂದ್ರ ನೇಮಕ

Suddi Udaya

ಗುರುವಾಯನಕೆರೆ ಎನ್‌ಇಟಿ ಕಾಲೇಜಿನಲ್ಲಿ ಓಣಂ ಸಂಭ್ರಮ: ಮಾವೇಲಿ ಪುರಪ್ರವೇಶ-ಚೆಂಡೆನಾದಕ್ಕೆ ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು

Suddi Udaya

ಪ್ರಾಥಮಿಕ ವಿಭಾಗದ ಕರಾಟೆ ಪಂದ್ಯಾಟ : ಸುಲ್ಕೇರಿ ಶ್ರೀರಾಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಬಳಂಜ ಶಾಲೆಯಲ್ಲಿ 89 ವರ್ಷದ ವೆಂಕಮ್ಮ ರವರಿಂದ ಮತದಾನ

Suddi Udaya
error: Content is protected !!