23 C
ಪುತ್ತೂರು, ಬೆಳ್ತಂಗಡಿ
April 17, 2025
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ದ್ವಿತೀಯ ಪಿಯುಸಿ ಪರೀಕ್ಷೆ ವಾಣಿಜ್ಯ ವಿಭಾಗದಲ್ಲಿ ಸಾಧನೆಗೈದ ಜೋಶನ್‌ ರಫಾಯೆಲ್‌ ಡಿಸೋಜ ರಿಗೆ ಮಡಂತ್ಯಾರು ಸೇಕ್ರೆಡ್‌ ಹಾಟ್‌೯ ವಿದ್ಯಾಸಂಸ್ಥೆಯ ವತಿಯಿಂದ ಸನ್ಮಾನ

ಮಡಂತ್ಯಾರು: ಇತ್ತೀಚೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ 2025 ರಲ್ಲಿ ವಾಣಿಜ್ಯ ವಿಭಾಗದಲ್ಲಿ 593 ಸಾಧನೆಗೈದು ರಾಜ್ಯ ಮಟ್ಟದಲ್ಲಿ 7ನೇ ಸ್ಥಾನ, ಜಿಲ್ಲಾ ಮಟ್ಟದಲ್ಲಿ 6ನೇ ಸ್ಥಾನ ಮತ್ತು ತಾಲೂಕು ಮಟ್ಟದಲ್ಲಿ ಮೊದಲ ಸ್ಥಾನ ಸಾಧನೆಗೈದ ಜೋಶನ್‌ ರಫಾಯೆಲ್‌ ಡಿಸೋಜ ಅವರನ್ನು ಸೇಕ್ರೆಡ್‌ ಹಾಟ್‌೯ ವಿದ್ಯಾಸಂಸ್ಥೆಗಳ ಜೊತೆ ಕಾಯ೯ದಶಿ೯ಗಳಾದ ವಂ|ಡಾ| ಸ್ಟ್ಯಾನಿ ಗೋವಿಯಸ್‌ ಹೂಹಾರ, ಫಲಪುಷ್ಪ ಹಾಗೂ ಪೇಟ ತೊಡಿಸಿ ಆಡಳಿತ ಮಂಡಳಿಯ ಪರವಾಗಿ ಸನ್ಮಾನಿಸಿದರು.

ಈ ಸಂದಭ೯ದಲ್ಲಿ ವಿದ್ಯಾಥಿ೯ಯ ಹೆತ್ತವರಾದ ಜೆರೋಮ್‌ ಡಿಸೋಜ ಹಾಗೂ ಶ್ರೀಮತಿ ರೀಟಾ ರೋಡ್ರಿಗಸ್‌ ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ವಿದ್ಯಾಥಿ೯ ಜೋಶನ್‌ ರಫಾಯೆಲ್‌ ಡಿಸೋಜ ತಮಗೆ ನೀಡಿದ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಮಾಗ೯ದಶ೯ನಕ್ಕೆ ವಂದನೆ ಸಲ್ಲಿಸಿದರು.

ಚಚ್‌೯ ಪಾಲನಾ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್‌ ಮೋರಸ್‌, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರುಗಳಾದ ವಿಲಿಯಂ ಪಿಂಟೊ ಹಾಗೂ ಐವನ್‌ ಸಿಕ್ವೇರಾ, ಆಡಳಿತ ಮಂಡಳಿಯ ಸದಸ್ಯರಾದ ಲಿಯೋ ನೊರೊನ್ಹಾ, ಫಿಲಿಪ್‌ ಡಿಕುನ್ಹಾ ಹಾಗೂ ಸಂಸ್ಥೆಯ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರಾಂಶುಪಾಲರು ಸೂರಜ್‌ ಚಾಲ್ಸ್‌೯ ಸ್ವಾಗತಿಸಿ, ಉಪನ್ಯಾಸಕ ವಿನ್ಸೆಂಟ್‌ ರೋಡ್ರಿಗಸ್‌ ಧನ್ಯವಾದವಿತ್ತರು. ಉಪನ್ಯಾಸಕಿ ಶ್ರೀಮತಿ ರೆನಿಶಾ ವೇಗಸ್‌ ಕಾರ‍್ಯಕ್ರಮ ನಿವ೯ಹಿಸಿದರು.

Related posts

ಕನ್ಯಾಡಿ ಸರ್ಕಾರಿ ಶಾಲೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Suddi Udaya

ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ: ರೂ. 25.82 ಲಕ್ಷ ನಿವ್ವಳ ಲಾಭ – ಸದಸ್ಯರಿಗೆ ಶೇ.10 ಡಿವಿಡೆಂಡ್

Suddi Udaya

ಕನ್ಯಾಡಿ 2 ಸ.ಉ.ಹಿ.ಪ್ರಾ. ಶಾಲೆಯಲ್ಲಿ ಬೇಸಿಗೆ ಶಿಬಿರದ ಸಮಾರೋಪ

Suddi Udaya

ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ವತಿಯಿಂದ ತಹಶೀಲ್ದಾರ್ ಮುಖಾಂತರ ರಾಜ್ಯ ಸರಕಾರಕ್ಕೆ ಮನವಿ

Suddi Udaya

ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಉಜಿರೆಯ ಸುಶ್ಮಿತಾ ರಾವ್ ಉನ್ನತ ಶ್ರೇಣಿ

Suddi Udaya

ಹಿರಿಯ ಯಕ್ಷಗಾನ ಭಾಗವತ ಧರ್ಣಪ್ಪ ಆಚಾರ್ಯ ಅಳದಂಗಡಿ ನಿಧನ

Suddi Udaya
error: Content is protected !!